Advertisement
ಹೌದು. ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿತ್ಯವೂ ಹೆಚ್ಚುತ್ತಿದೆ. ಜನರು ದಿನಬಳಕೆಯ ವಸ್ತುಗಳ ಖರೀದಿಯೊಂದಿಗೆ ಮನೆಯಲ್ಲಿದ್ದು ಸೋಂಕು ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ. ಆದರೆ, ಬಹುತೇಕರು, ಅಗತ್ಯಕ್ಕಿಂತ ಅನಗತ್ಯ ವಸ್ತುಗಳ ಹುಡುಕಾಟ, ಖರೀದಿಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಸೋಮವಾರ ಕಂಡು ಬಂತು. ಮದ್ಯದ ಅಂಗಡಿ ಎದುರು ಸಾಲು: ಮತ್ತೆ 14 ದಿನಗಳ ಕಾಲ ಲಾಕ್‌ಡೌನ್ ಆಗುತ್ತದೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಹಲವರು ಮದ್ಯದಂಗಡಿಗಳ ಎದುರು ಸಾಲು ನಿಂತರೆ, ಇನ್ನೂ ಹಲವರು ಕಿರಾಣಿ ಅಂಗಡಿ, ತರಕಾರಿ ಖರೀದಿಗೆ ಮುಂದಾಗಿದ್ದರು. ಅದರಲ್ಲೂ ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲಿರುವ ಎಂಎಸ್‌ಐಎಲ್ ಮದ್ಯದ ಅಂಗಡಿಗಳ ಎದುರು ಕಾರು, ಬೈಕ್ ಸಮೇತ ಬಂದಿದ್ದ ಜನರು, ಬಾಕ್ಸ್‌ಗಟ್ಟಲೇ ಮದ್ಯದ ಬಾಟಲ್ ಖರೀದಿಗೆ ಮುಗಿ ಬಿದ್ದರು. ಅಂಗಡಿಕಾರರು, ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಾಕಿಕೊಂಡು ಒಳ ಬಂದವರಿಗೆ ಮಾತ್ರ ಮದ್ಯ ಪೂರೈಸುತ್ತೇವೆ ಎಂಬ ಫಲಕ ಹಾಕಿದ್ದರಾದರೂ ಅದು ಅನುಷ್ಠಾನಕ್ಕೆ ಬರಲಿಲ್ಲ ಎನ್ನಲಾಗಿದೆ.
Advertisement
ಕೋವಿಡ್‍ಗಿಂತ ಜೀವನ ನಿರ್ವಹಣೆಯದ್ದೇ ಚಿಂತೆ!
05:57 PM Apr 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.