Advertisement

ಹುಮನಾಬಾದ: ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು 21 ಕೊವೀಡ್ ಪ್ರಕರಣ ಪತ್ತೆ

12:03 PM Jan 15, 2022 | Team Udayavani |

ಹುಮನಾಬಾದ: ಪಟ್ಟಣದ ವಾಂಜರಿ ಬಡಾವಣೆಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ಎರೆಡು ದಿನಗಳ ಹಿಂದೆ 5 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ನಂತರ ಆರೋಗ್ಯ ಇಲಾಖೆ ನಡೆದ ಇತರೆ ಮಕ್ಕಳ ಪರೀಕ್ಷೆಯಲ್ಲಿ ಇವತ್ತು ಮತ್ತೆ 14 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಸಿಬ್ಬಂದಿಗಳಿಗೆ ಸೊಂಕು ತಗಲಿರುವುದು ದೃಢಪಟ್ಟಿದೆ.

Advertisement

ವಸತಿ ಶಾಲೆಯಲ್ಲಿ ಒಟ್ಟಾರೆ 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಕೆಲ ವಿದ್ಯಾರ್ಥಿಗಳಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಐದು ವಿದ್ಯಾರ್ಥಿಗಳಿಗೆ  ಸೋಂಕು ಇರುವುದು ಗೊತ್ತಾಗಿತ್ತು, ನಂತರ ತಾಲೂಕು ಆಡಳಿತ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಕೊವೀಡ್ ಪರೀಕ್ಷೆ ನಡೆಸಿದರು.

ಇದೀಗ ಮತ್ತೆ 16 ಪ್ರಕರಣಗಳು ಪತ್ತೆಯಾಗಿದ್ದು, ವಸತಿ ನಿಲಯದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಕೊವೀಡ್ ನೆಗೆಟಿವ್ ವರದಿ ಬಂದ ಮಕ್ಕಳಿಗೆ ಮನೆಗೆ ಕಳುಹಿಸಿ ಉಳಿದ ಮಕ್ಕಳಿಗೆ ಅದೇ ವಸತಿ ಶಾಲೆಯಲ್ಲಿ ವ್ತವಸ್ಥೆಗೆ ತಾಲೂಕು ಆಡಳಿತ ಸಜ್ಜಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next