Advertisement

ಅಧ್ಯಾಪಕರಿಗೆ ಸೋಂಕು, ಕಾಲೇಜಿನ 1,100 ವಿದ್ಯಾರ್ಥಿಗಳಿಗೂ ಕೋವಿಡ್‌ ಟೆಸ್ಟ್‌

11:55 AM Jan 25, 2022 | Team Udayavani |

ಗುಂಡ್ಲುಪೇಟೆ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದ 10 ಮಂದಿಗೆ ಪಾಸಿಟಿವ್‌ ಕಾಣಿಸಿಕೊಂಡ ಹಿನ್ನೆಲೆ 5 ದಿನ (ಜ.23ರಭಾನುವಾರದಿಂದ ಜ.27ರ ಗುರುವಾರ) ಕಾಲೇಜಿಗೆ ತಾಲೂಕು ಹಾಗೂ ಜಿಲ್ಲಾಡಳಿತ ಆದೇಶದ ಮೇರೆಗೆ ರಜೆ ಘೋಷಿಸಲಾಗಿದೆ.

Advertisement

ಕಾಲೇಜಿನಲ್ಲಿ ಅಧ್ಯಾಪಕರು, ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಕೆಲಸ ನಿರ್ವಹಿಸುತ್ತಿದ್ದು, 10ಜನರಿಗೆ ಸೋಂಕು ದೃಢಪಟ್ಟಿದೆ. ಗುರುವಾರ ಒಬ್ಬ ಅಧ್ಯಾಪಕರಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ಎಲ್ಲಾ ಸಿಬ್ಬಂದಿ ಪರೀಕ್ಷೆಗೆ ಒಳಪಟ್ಟರು. ಅದರ ವರದಿ ಶನಿವಾರ ಸಂಜೆ ಬಂದ ನಂತರ 10 ಜನರಿಗೆ ಪಾಸಿಟಿವ್‌ ಬಂದಿದೆ.

ಕಾಲೇಜಿನಲ್ಲಿ 1,100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಧ್ಯಾಪಕರಿಗೆ ಪಾಸಿ ಟಿವ್‌ಬಂದಿರುವ ಹಿನ್ನೆಲೆ ವಿದ್ಯಾರ್ಥಿಗಳು ತಪಾಸಣೆಗೆಒಳಪಡಬೇಕೆಂದು ಮನವಿ ಮಾಡಿದ್ದಾರೆ.

ಆನ್‌ಲೈನ್‌ ತರಗತಿ ಮೊರೆ: ಕಾಲೇಜಿಗೆ 5 ದಿನ ರಜೆ ಘೋಷಣೆ ಹಿನ್ನೆಲೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಬಾರದು ಎಂದು ಭೌತಿಕ ತರಗತಿ ರದ್ದು ಮಾಡಿ ಆನ್‌ಲೈನ್‌ ಮೊರೆ ಹೋಗಿದ್ದಾರೆ. ಆ.28ರ ಶುಕ್ರವಾರದಿಂದ ಎಂದಿನಂತೆ ತರಗತಿ ಆರಂಭವಾಗಲಿದೆ.

ಕಾಲೇಜಿಗೆ ಸ್ಯಾನಿಟೈಸರ್‌: ಕಾಲೇಜಿಗೆ ಪುರಸಭೆವತಿಯಿಂದ ಸ್ಯಾನಿಟೈಸರ್‌ ಮಾಡಿಸಲು ಸಿದ್ಧತೆ ನಡೆಸಲಾಗಿದೆ. ಸೋಮವಾರ ಕಾಲೇಜಿನ ಎಲ್ಲಾ ಕೊಠಡಿಗೂ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗುತ್ತದೆ.

Advertisement

32 ಶಾಲಾ ಮಕ್ಕಳಿಗೆ ಕೋವಿಡ್‌ ಪಾಸಿಟಿವ್‌ :

ಗುಂಡ್ಲುಪೇಟೆ: ತಾಲೂಕಿನಲ್ಲಿ 32 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ 20 ಸಕ್ರಿಯ ಪ್ರಕರಣಗಳಿವೆ. ಅಧಿಕವಾಗಿ ಹಂಗಳ ಕರ್ನಾಟಕ ಪಬ್ಲಿಕ್‌ ಶಾಲೆ 6, ಪಟ್ಟಣದ ಸೆಂಟ್‌ ಜಾನ್ಸ್‌ ಶಾಲೆ 7, ಹೆಗ್ಗಡಹಳ್ಳಿ ಶಾಲೆ 4 ಮಕ್ಕಳಿಗೆ ಪಾಸಿಟಿವ್‌ ಕಾಣಿಸಿಕೊಂಡಿದೆ.

ಶಾಲೆಗಳಲ್ಲಿ ಮಕ್ಕಳಿಗೆ ಥರ್ಮಲ್‌ ಸ್ಕ್ಯಾನಿಂಗ್‌ ನಡೆಸಿದ ವೇಳೆ ಜ್ವರ ಸೇರಿದಂತೆ ಇನ್ನಿತರಸಮಸ್ಯೆ ಕಂಡು ಬಂದರೆ ಐಸೋಲೇಷನ್‌ ರೂಂನಲ್ಲಿ ಕೂರಿಸಲಾಗುವುದು. ಇದರಿಂದ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ.

ವಿದ್ಯಾರ್ಥಿಗಳಿಗೆ ಜ್ವರ ಸೇರಿದಂತೆ ಇನ್ನಿತರ ಲಕ್ಷಣ ಕಂಡು ಬಂದರೆ ಪರೀಕ್ಷೆಗೆಒಳಗಾಗುವಂತೆ ಈಗಾಗಲೇ ತಿಳಿಸಲಾಗಿದೆ. ಆದರೆ ಇಲ್ಲಿಯ ತನಕ ಯಾವುದೇ ವಿದ್ಯಾರ್ಥಿಯಿಂದ ಮಾಹಿತಿ ಬಂದಿಲ್ಲ. – ಮಲ್ಲೇಶ್‌, ಪ್ರಾಂಶುಪಾಲರು, ಪ್ರಥಮ ದರ್ಜೆ ಕಾಲೇಜು

– ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next