ಬೆಂಗಳೂರು: ದೀಪಾವಳಿ ಹಬ್ಬ ಮುಕ್ತಾಯವಾದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆಯಾಗಿದ್ದು, ಕಳೆದ ಮೂರು ದಿನಗಳಿಂದ ಶೂನ್ಯ ಸಾವಿನ ಪ್ರಕರಣ ದಾಖಲಾಗಿದೆ.
ಅ.25ರಂದು ದಾಖಲಾಗಿದ್ದ 76 ಹೊಸ ಕೋವಿಡ್ ಪ್ರಕರಣ ಅ.26ಕ್ಕೆ 82ಕ್ಕೆ ಏರಿಕೆಯಾಗಿತ್ತು. ಅ.27ರಂದು 195ಕ್ಕೆ ಏರಿಕೆಯಾಗಿದೆ. 233 ಮಂದಿ ಗುರುವಾರ ಬಿಡುಗಡೆಯಾಗಿದ್ದು, 1,915 ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿದೆ.
ದೀಪಾವಳಿ ಹಬ್ಬದ ಬಳಿಕ ರಾಜ್ಯ ರಾಜಧಾನಿಯಲ್ಲಿ 175 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಪ್ರಕರಣ ವರದಿಯಾಗಿದೆ. ಆದರೆ, ಕಳೆದ 3 ದಿನಗಳಿಂದ ಕೋವಿಡ್ ಸಾವಿನ ಪ್ರಮಾಣ ಶೂನ್ಯದಲ್ಲಿದೆ.