Advertisement

ಸೋಂಕು ಹೆಚ್ಚಳ; ಲಾಕ್‌ಡೌನ್‌, ಕರ್ಫ್ಯೂ ಚರ್ಚೆ ಮುನ್ನೆಲೆಗೆ : ಸಿಎಂ ಎಚ್ಚರದ ಮನವಿ

02:59 AM Mar 15, 2021 | Team Udayavani |

ಬೆಂಗಳೂರು: ಒಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯ ಹಾದಿ ಹಿಡಿದಿದ್ದು, ನಿತ್ಯ ಪತ್ತೆಯಾಗುವ ಹೊಸ ಪ್ರಕರಣಗಳು ಒಂದು ಸಾವಿರದ ಆಸುಪಾಸಿನಲ್ಲಿವೆ. ಇದರಿಂದ ಮತ್ತೆ ರಾತ್ರಿ ಕರ್ಫ್ಯೂ, ಲಾಕ್‌ಡೌನ್‌ ಜಾರಿ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ.

Advertisement

ಜನರು ನಿಯಮ ಪಾಲಿಸದೆ ಸೋಂಕು ಹೆಚ್ಚಾ ದರೆ ಲಾಕ್‌ಡೌನ್‌ ಅನಿವಾರ್ಯ ಎಂದು ಸಿಎಂ ಯಡಿಯೂರಪ್ಪ ರವಿವಾರ ಎಚ್ಚರಿಕೆ ನೀಡಿದ್ದಾರೆ. ಈ ಹಿಂದಿನ ಕಠಿನ ದಿನಗಳು ಮತ್ತೆ ಬರಬಾರದು ಎಂದಿದ್ದಲ್ಲಿ ಸೋಂಕು ಹತೋಟಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಫೆಬ್ರವರಿ ಕೊನೆಯ ವಾರದ ವರೆಗೆ ನಿತ್ಯ ಸರಾಸರಿ 400ರಷ್ಟು ಇದ್ದ ಸೋಂಕು ಪ್ರಕರಣಗಳು ಮಾರ್ಚ್‌ ಮೊದಲ ವಾರ 530ಕ್ಕೆ ಮುಟ್ಟಿದ್ದವು. ಮಾರ್ಚ್‌ ಎರಡನೇ ವಾರ 730ಕ್ಕೆ ಏರಿವೆ. ಜನವರಿ ಬಳಿಕ ಇದೇ ಮೊದಲ ಬಾರಿಗೆ ಪ್ರಕರಣಗಳು ಒಂದು ಸಾವಿರದ ಆಸುಪಾಸಿನಲ್ಲಿ ವರದಿಯಾಗುತ್ತಿವೆ. ರವಿವಾರ 50 ದಿನಗಳ ಬಳಿಕ ಅತೀ ಹೆಚ್ಚು 934 ಪ್ರಕರಣಗಳು ದಾಖಲಾಗಿವೆ.

ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್‌, ಮಹಾರಾಷ್ಟ್ರ ದಂತೆ ಕೆಲವು ಜಿಲ್ಲೆ ಲಾಕ್‌ಡೌನ್‌ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ದಿನದ ದುಡಿಮೆಯನ್ನು ನಂಬಿರುವ ಕಾರ್ಮಿಕ ವರ್ಗವು ಮತ್ತೆ ಸಂಕಷ್ಟದ ದಿನಗಳನ್ನು ಎದುರಿಸುವ ಆತಂಕದಲ್ಲಿದೆ.

36 ಯೋಜನೆ ಕೋವಿಡ್‌ಗೆ “ಬಲಿ’
ಹಿಂದಿನ ಬಜೆಟ್‌ನಲ್ಲಿ ಪ್ರಕಟಿಸಿದ್ದ 36ಕ್ಕೂ ಹೆಚ್ಚು ಯೋಜನೆ, ಕಾರ್ಯ ಕ್ರಮ, ಘೋಷಣೆಗಳು ಕೊರೊನಾಕ್ಕೆ “ಬಲಿ’ಯಾಗಿವೆ. ಸುಮಾರು 950 ಕೋಟಿ ರೂ. ಮೊತ್ತದ ಕಾರ್ಯಕ್ರಮಗಳಿಗೆ ಕೊಕ್‌ ನೀಡಲಾಗಿರುವುದು ಅನುಪಾಲನ ವರದಿಯಲ್ಲಿ ಬಯಲಾಗಿದೆ.

Advertisement

ಕೈ ಬಿಡಲಾದ ಪ್ರಮುಖ ಯೋಜನೆಗಳು
- ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮ
- ಪ್ರವಾಸೋದ್ಯಮ ಇಲಾಖೆಯ ಜೀವನಚೈತ್ರ
- ಕರ್ನಾಟಕ ಮತ್ಸ  é ವಿಕಾಸ ಯೋಜನೆ
- ವಿದ್ಯುತ್‌ ಶುಲ್ಕ ಮರುಪಾವತಿ ಯೋಜನೆ

 ಇಂದು ತಜ್ಞರ ಜತೆ ಸಿಎಂ ಸಭೆ
ರಾಜ್ಯದಲ್ಲಿ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸಿಎಂ ಸೋಮವಾರ ಸಂಜೆ ಆರೋಗ್ಯ ತಜ್ಞರ ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಯಾ ರಾತ್ರಿ ಕರ್ಫ್ಯೂ ಹೇರಿಕೆ ಸಂಬಂಧ ಚರ್ಚೆ ನಡೆಯುವ ಸಾಧ್ಯತೆಗಳಿವೆ.

 ಸುಳ್ಳು ಸುದ್ದಿಗಳ ಭರಾಟೆ
ಸಾಮಾಜಿಕ ಜಾಲತಾಣಗಳಲ್ಲಿ ಲಾಕ್‌ಡೌನ್‌ ಜಾರಿ, ಶಾಲಾ ಕಾಲೇಜು ಸ್ಥಗಿತ, ಪರೀಕ್ಷೆ ನಡೆಸದೆ ಉತ್ತೀರ್ಣ ಇತ್ಯಾದಿ ನಕಲಿ ಪೋಸ್ಟ್‌ಗಳು ಓಡಾಡುತ್ತಿವೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳು ವುದಾಗಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.

ಜನರಲ್ಲಿ ಕೈಮುಗಿದು ಕೇಳಿಕೊಳ್ಳು ತ್ತೇನೆ; ಸರಕಾರದೊಂದಿಗೆ ಕೊರೊನಾ ತಡೆಗೆ ಸಹ ಕಾರ ನೀಡಿ. ಕಡ್ಡಾಯ ನಿಯಮ ಪಾಲನೆ, ಮುಂಜಾಗ್ರತೆ ಯಿಂದ ಲಾಕ್‌ಡೌನ್‌ ಇಲ್ಲದೆ ಸೋಂಕನ್ನು ನಿಯಂತ್ರಿಸ ಬಹುದು.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next