Advertisement

ಟೋಕಿಯೊದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ : ಹೆಚ್ಚಿತು ಒಲಿಂಪಿಕ್ಸ್‌ ಕಳವಳ

10:38 PM Jul 10, 2021 | Team Udayavani |

ಟೋಕಿಯೊ : ಟೋಕಿಯೊದಲ್ಲಿ ಶನಿವಾರ ಕಳೆದೆರಡು ತಿಂಗಳಲ್ಲೇ ಅತ್ಯಧಿಕವೆನಿಸಿದ 950 ಕೊರೊನಾ ಪಾಸಿಟಿವ್‌ ಕೇಸ್‌ಗಳು ಕಂಡು ಬಂದಿದ್ದು, ಸಹಜವಾಗಿಯೇ ಒಲಿಂಪಿಕ್ಸ್‌ ಆತಿಥ್ಯದ ಕಳವಳವನ್ನು ಹೆಚ್ಚಿಸಿದೆ.

Advertisement

ಟೋಕಿಯೊದಲ್ಲಿ ಶುಕ್ರವಾರ 822 ಪಾಸಿಟಿವ್‌ ಕೇಸ್‌ ದಾಖಲಾಗಿತ್ತು. ಶನಿವಾರ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರಧಾನಿ ಯೊಶಿಹಿಡೆ ಸುಗ ಸೋಮವಾರದಿಂದ “ಸ್ಟೇಟ್‌ ಆಫ್ ಏಮರ್ಜೆನ್ಸಿ’ಯನ್ನು ಜಾರಿಗೊಳಿಸಿದ್ದಾರೆ. ಈ ತುರ್ತು ಸ್ಥಿತಿ ಒಲಿಂಪಿಕ್ಸ್‌ ಕೂಟದುದ್ದಕ್ಕೂ ಮುಂದುವರಿಯಲಿದೆ.

ವ್ಯಾಕ್ಸಿನೇಶನ್‌ ತೀರಾ ನಿಧಾನ
ಜಪಾನ್‌ನಲ್ಲಿ ವ್ಯಾಕ್ಸಿನೇಶನ್‌ ತೀರಾ ನಿಧಾನ ಗತಿಯಲ್ಲಿ ಸಾಗುತ್ತಿರುವುದು ಕೂಡ ಕೊರೊನಾ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವರೆಗೆ ಶೇ. 16.8ರಷ್ಟು ಜನರಿಗಷ್ಟೇ ಪೂರ್ಣ ಪ್ರಮಾಣದ ಲಸಿಕೆ ನೀಡಲಾಗಿದೆ.

ಚಿಯರ್‌ ಫಾರ್‌ ಇಂಡಿಯಾ; ಕ್ರಿಕೆಟಿಗರ ಬೆಂಬಲ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ “ಚಿಯರ್‌ ಫಾರ್‌ ಇಂಡಿಯಾ’ ಅಭಿಯಾನಕ್ಕೆ ಭಾರತದ ಕ್ರಿಕೆಟ್‌ ತಾರೆಗಳು ಅಮೋಘ ಬೆಂಬಲ ವ್ಯಕ್ತಪಡಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಶುಭ ಕೋರುವ ಅಭಿಯಾನ ಇದಾಗಿದ್ದು, ಕ್ರಿಕೆಟಿಗರ ಶುಭಾಶಯ ಹೊತ್ತ ವೀಡಿಯೋ ಒಂದನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಮಿಥಾಲಿ ರಾಜ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜೆಮಿಮಾ ರೋಡ್ರಿಗಸ್‌, ಅಜಿಂಕ್ಯ ರಹಾನೆ, ಹಲೀìನ್‌ ದೇವಲ್‌ ಅವರೆಲ್ಲ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next