ಬೆಂಗಳೂರು : ರಾಜ್ಯದಲ್ಲಿ ಇಂದು 42470 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಶನಿವಾರ ಅರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಅಂಕಿಅಂಶದಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಇಂದು ಒಟ್ಟು 42470 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 17266 ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಕೋವಿಡ್ ಪಾಸಿಟಿವಿಟಿ ದರ 19.33% ಹೊಂದಿದೆ.
35140 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ3,30,447 ಸಕ್ರಿಯ ಪ್ರಕರಣಗಳಿದ್ದು,ಬೆಂಗಳೂರಿನಲ್ಲಿ ಅತೀ ಹೆಚ್ಚು 2 ಲಕ್ಷದ ೧೮ ಸಾವಿರ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 26 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ 06 ಮಂದಿ ಬೆಂಗಳೂರಿನವರಾಗಿದ್ದಾರೆ.
ಎಲ್ಲೆಲ್ಲಿ ಎಷ್ಟು ಪ್ರಕರಣ :
ಬಾಗಲಕೋಟೆ 42, ಬಳ್ಳಾರಿ 845 , ಬೆಳಗಾವಿ 405 , ಬೆಂಗಳೂರು ಗ್ರಾಮಾಂತರ 958 , ಬೆಂಗಳೂರು ನಗರ 17266 , ಬೀದರ್ 138, ಚಾಮರಾಜನಗರ 397, ಚಿಕ್ಕಬಳ್ಳಾಪುರ 892, ಚಿಕ್ಕಮಗಳೂರು 166, ಚಿತ್ರದುರ್ಗ 622, ದಕ್ಷಿಣಕನ್ನಡ 795, ದಾವಣಗೆರೆ 645, ಧಾರವಾಡ 790, ಗದಗ 306, ಹಾಸನ 2679, ಹಾವೇರಿ 124, ಕಲಬುರಗಿ 665, ಕೊಡಗು 653, ಕೋಲಾರ 1417, ಕೊಪ್ಪಳ 138, ಮಂಡ್ಯ 1822, ಮೈಸೂರು 4601, ರಾಯಚೂರು 236, ರಾಮನಗರ 506, ಶಿವಮೊಗ್ಗ 474, ತುಮಕೂರು 3417, ಉಡುಪಿ 877, ಉತ್ತರ ಕನ್ನಡ 390, ವಿಜಯಪುರ 125, ಯಾದಗಿರಿ 79