ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ, ದಿನೆ ಏರುತ್ತಲೇ ಇದೆ. ಶನಿವಾರ 152 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1508ಕ್ಕೇರಿದೆ. ಶನಿವಾರವೂ ಇಬ್ಬರು ಸಾವನ್ನಪ್ಪಿದ್ದು, ಕೋವಿಡ್ ಸೋಂಕಿನಿಂದ ಮೃತರ ಸಂಖ್ಯೆ 41ಕ್ಕೆ ಏರಿದೆ.
ಮೃತಪಟ್ಟಿರುವ ಇಬ್ಬರ ಪೈಕಿ ಹಾಸನದ 75 ವರ್ಷದ ವೃದ್ಧೆ ಜ್ವರ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಹಾಸನದ 68 ವರ್ಷದ ವೃದ್ಧ ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಬ್ಬರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶನಿವಾರ ಸೋಂಕು ದೃಢಪಟ್ಟಿರುವವರ ಪೈಕಿ ಅರಸೀಕೆರೆಯ ಒಬ್ಬ ಪತ್ರಕರ್ತ, ಹಾಸನದ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್, ಅರಸೀಕೆರೆಯ ಇಬ್ಬರು ಆರೋಗ್ಯ ಕಾರ್ಯಕರ್ತರು, ಅರಸೀಕೆರೆ ಮತ್ತು ಬೇಲೂರು ತಾಲೂಕಿನ ತಲಾ ಒಬ್ಬ ಆರೋಗ್ಯ ಕಾರ್ಯಕರ್ತರೂ ಸೇರಿದ್ದಾರೆ.
152 ಜನರ ಪೈಕಿ ಅರಸೀಕೆರೆ ತಾಲೂಕಿನ 41 ಮಂದಿ, ಹಾಸನ ತಾಲೂಕಿನ 35, ಹೊಳೆನರಸೀಪುರ ತಾಲೂಕಿನ 20, ಚನ್ನರಾಯಪಟ್ಟಣ ತಾಲೂಕಿನ 18, ಅರಕಲಗೂಡು ತಾಲೂಕಿನ 15, ಬೇಲೂರು ತಾಲೂಕಿನ 11, ಸಕಲೇಶಪುರ ತಾಲೂಕಿನ 8, ಆಲೂರು ತಾಲೂಕಿನ 4 ಮಂದಿಗೆ ಸೋಂಕು ಹರಡಿದೆ.
67 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿದ್ದು, ಇದುವರೆಗೂ ಒಟ್ಟು 778 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೀವ್ರ ನಿಗಾ ಘಟಕ ( ಐಸಿಯು) ದಲ್ಲಿರುವ 25 ಮಂದಿ ಸೇರಿ ಇನ್ನೂ 689 ಮಂದಿಗೆ ಚಿಕಿತ್ಸೆ ಮುಂದುವರಿದೆ.
ಕೋವಿಡ್ ಸೋಂಕಿತರ ತಾಲೂಕುವಾರು ವಿವರ
ಹಾಸನ – 496
ಅರಸೀಕೆರೆ – 343
ಚನ್ನರಾಯಪಟ್ಟಣ – 323
ಹೊಳೆನರಸೀಪುರ – 149
ಬೇಲೂರು – 89
ಅರಕಲಗೂಡು – 82
ಸಕಲೇಶಪುರ – 59
ಆಲೂರು – 59
ಅನ್ಯ ಜಿಲ್ಲೆ – 08
ಒಟ್ಟು -1508
ಹಾಸನ ಕೋವಿಡ್ ಅಂಕಿ ಅಂಶ
ಸಾವು 41
ಸೋಂಕಿತರು 1508
ಚಿಕಿತ್ಸೆ ಪಡೆಯುತ್ತಿರುವರು 689
ಗುಣಮುಖರಾದವರು 778