Advertisement

ಭಟ್ಕಳ ಮತ್ತೆ 8 ಪ್ರಕರಣ : ಗಡಿಯಲ್ಲಿ ತೀವ್ರಗೊಂಡ ತಪಾಸಣೆ

12:54 PM May 10, 2020 | sudhir |

ಉಡುಪಿ: ಭಟ್ಕಳದಲ್ಲಿ ಶುಕ್ರವಾರ 12 ಕೋವಿಡ್ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದ ಮರುದಿನ ಶನಿವಾರವೂ ಎಂಟು ಪ್ರಕರಣ ದೃಢಪಟ್ಟು ಭಟ್ಕಳದಲ್ಲಿಯೇ ಒಟ್ಟು 31 ಪ್ರಕರಣಗಳು ಕಂಡುಬಂದ ಕಾರಣ ಉಡುಪಿ ಜಿಲ್ಲೆಯ ಗಡಿ ಶಿರೂರಿನ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಭಟ್ಕಳದಿಂದ ಶಿರೂರಿಗೆ ಬರಲಿರುವ ತೂದಳ್ಳಿಯೇ ಮೊದಲಾದ ಐದಾರು ಮಾರ್ಗಗಳನ್ನೂ ಮುಚ್ಚಲಾಗಿದೆ. ಎಲ್ಲ ವಾಹನಗಳನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ.

Advertisement

ಶನಿವಾರ 67 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಎಂಟು ಮಂದಿ ಉಸಿರಾಟದ ಸಮಸ್ಯೆಯವರು, ಒಬ್ಬರು ಕೊರೊನಾ ಸಂಪರ್ಕದವರು, ಎಂಟು ಮಂದಿ ಫ್ಲೂ ಜ್ವರದವರು, 50 ಮಂದಿ ಹಾಟ್‌ಸ್ಪಾಟ್‌ ಸಂಪರ್ಕದವರಿದ್ದಾರೆ. 16 ಜನರ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿದೆ. 163 ಜನರ ವರದಿಗಳು ಕೈಸೇರಬೇಕಾಗಿದೆ.

60 ಮಂದಿ ನೋಂದಣಿ ಮಾಡಿಸಿ ಕೊಂಡಿದ್ದಾರೆ. 124 ಮಂದಿ 28 ದಿನಗಳ, 73 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ.

695 ಮಂದಿ ಮನೆಗಳ ನಿಗಾವಣೆಯಲ್ಲಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ಗೆ ಶನಿವಾರ ಯಾರೂ ಸೇರಿಲ್ಲ. 23 ಮಂದಿ ಕ್ವಾರಂಟೈನ್‌ನಲ್ಲಿದ್ದು ಒಬ್ಬರು ಬಿಡುಗಡೆಗೊಂಡಿದ್ದಾರೆ. 17 ಮಂದಿ ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದಾರೆ. ಎಂಟು ಮಂದಿ ಬಿಡುಗಡೆಗೊಂಡಿದ್ದು 55 ಜನರು ವಾರ್ಡ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next