Advertisement

ಹೆಚ್ಚಿತ್ತಿರುವ ಕೋವಿಡ್ ಪ್ರಕರಣ : ಚೀನಾದ ಶಿಯಾನ್‌ನಲ್ಲಿ ಪೂರ್ತಿ ಲಾಕ್‌ಡೌನ್‌  

08:02 PM Dec 22, 2021 | Team Udayavani |

ಬೀಜಿಂಗ್‌/ಜೆರುಸಲೇಂ: ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ದೇಶದ ಉತ್ತರ ಭಾಗದ ನಗರ ಶಿಯಾನ್‌ನಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

Advertisement

ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿ ಇರಲಿದೆ. 1.3 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಹೊಸತಾಗಿ 53 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಡಿ.9ರ ನಂತರ ಅಲ್ಲಿನ ಒಟ್ಟು ಕೊರೊನಾಪೀಡಿತರ ಸಂಖ್ಯೆ 143ಕ್ಕೇರಿದೆ. ಇದರ ಜತೆಗೆ 2022ರ ಫೆಬ್ರವರಿಯಲ್ಲಿ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್‌ ಕೂಡ ನಡೆಯಲಿದೆ. ಹೀಗಾಗಿ, ಬಿಗಿ ನಿಯಂತ್ರಣ ಕ್ರಮಗಳನ್ನೂ ಕೈಗೊಂಡಿದೆ.

ಹೇಗಿರಲಿದೆ ಲಾಕ್‌ಡೌನ್‌?: ಎಲ್ಲರೂ ಮನೆಯಲ್ಲೇ ಇರಬೇಕು. ನಗರದ ಅಷ್ಟೂ ಮಂದಿಯನ್ನು ನಗರಾಡಳಿತ ಪರೀಕ್ಷೆಗೊಳಪಡಿಸಲಿದೆ. ಅಗತ್ಯವಸ್ತುಗಳನ್ನು ಕೊಳ್ಳಲು ಮನೆಯ ಒಬ್ಬರು ವ್ಯಕ್ತಿ ಎರಡು ದಿನಕ್ಕೊಮ್ಮೆ ಮಾತ್ರ ಹೊರಹೋಗಬಹುದು.

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ, ಭೂರಿ ಭೋಜನ : ವಿಡಿಯೋ ವೈರಲ್‌

Advertisement

Udayavani is now on Telegram. Click here to join our channel and stay updated with the latest news.

Next