Advertisement

ಗದಗ : ಕೋವಿಡ್ ಗೆ 58 ವರ್ಷದ ಮಹಿಳೆ ಸಾವು

10:19 PM Jul 11, 2022 | Team Udayavani |

ಗದಗ : ಸ್ಥಳೀಯ ಕೆ.ಆರ್.ನಗರದ ನಿವಾಸಿ 58 ವರ್ಷದ ಮಹಿಳೆ ಜು. 8ರಂದು ಸಾವಿಗೀಡಾಗಿಡಾಗಿದ್ದಾರೆ.

Advertisement

ಜು. 4ರಂದು ವಾಂತಿ ಭೇದಿ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು ಈ ವೇಳೆ ಸೋಂಕು ದೃಢಪಟ್ಟಿತ್ತು. ನ್ಯುಮೋನಿಯಾ, ಶ್ವಾಸಕೋಶ ತೊಂದರೆ ಮತ್ತು ವಾಂತಿ ಭೇದಿಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಸಕ್ರಿಯ ಪ್ರಕರಣಗಳು 3 : ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಂಡು ಬರುತ್ತಿವೆ.

ಜಿಲ್ಲೆಯಲ್ಲಿ ಸೋಮವಾರ ಒಂದು ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು 3 ಜನರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಆಟೋ ರಿಕ್ಷಾದಲ್ಲಿ 26 ಮಂದಿ ಪ್ರಯಾಣ; ದಿಗ್ಭ್ರಮೆಗೊಂಡ ಪೊಲೀಸರು!!

Advertisement
Advertisement

Udayavani is now on Telegram. Click here to join our channel and stay updated with the latest news.

Next