Advertisement

ಕೋವಿಡ್ ಪ್ರಕರಣ: 2023ರಲ್ಲಿ ಚೀನದಲ್ಲಿ 10 ಲಕ್ಷ ಸಾವು?

10:41 PM Dec 17, 2022 | Team Udayavani |

ಬೀಜಿಂಗ್‌: ಕೊರೊನಾ ನಿಯಂತ್ರಣಕ್ಕಾಗಿ ಚೀನದಲ್ಲಿ ಹೇರಲಾಗಿದ್ದ ಕಠಿಣ ನಿರ್ಬಂಧಗಳನ್ನು ತೆರವುಗೊಳಿಸಿರುವುದರಿಂದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಬಹುದು.

Advertisement

2023ರ ವೇಳೆಗೆ ಕೊರೊನಾದಿಂದ ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರ ಸಾವು ಸಂಭವಿಸಬಹುದು ಎಂದು ಅಮೆರಿಕ ಮೂಲದ ಇನ್ಸ್ಟಿಟ್ಯೂಟ್‌ ಆಫ್ ಹೆಲ್ತ್‌ ಮೆಟ್ರಿಕ್ಸ್‌ ಆ್ಯಂಡ್‌ ಎವಲ್ಯುಯೇಷನ್‌ (ಐಎಚ್‌ಎಂಇ) ವರದಿಯಲ್ಲಿ ಅಂದಾಜಿಸಲಾಗಿದೆ.

“ವರದಿಯ ಪ್ರಕಾರ, ಚೀನದಲ್ಲಿ 2023ರ ಏ.1ರ ವೇಳೆಗೆ ಕೋವಿಡ್‌ ಪ್ರಕರಣಗಳು ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿಕೆಯಾಲಿವೆ. ಆ ವೇಳೆಗೆ ಸಾವಿನ ಸಂಖ್ಯೆ 3,22,000ಕ್ಕೆ ತಲುಪಬಹುದು,’ ಎಂದು ಐಎಚ್‌ಎಂಇ ನಿರ್ದೇಶಕ ಕ್ರಿಸ್ಟೋಫ‌ರ್‌ ಮುರ್ರೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next