Advertisement

ಕ್ಲಬ್‌ ಹೌಸ್‌ನಲ್ಲೂ ಕೋವಿಡ್‌ ಕೇರ್‌ ಕೇಂದ್ರ

06:19 AM Jul 07, 2020 | Lakshmi GovindaRaj |

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಕ್ಲಬ್‌ ಹೌಸ್‌ಗಳನ್ನು ಕೋವಿಡ್‌ ಕೇರ್‌ ಕೇಂದ್ರವಾಗಿ ಪರಿವರ್ತಿಸಲು ಮಾತುಕತೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು.  ಕಂದಾಯ ಸಚಿವ ಆರ್‌.ಅಶೋಕ್‌ ಸೇರಿದಂತೆ ನಗರದ ಕೆಲವು ಶಾಸಕರು, ಅಧಿಕಾರಿಗಳ ಜತೆ ಸೋಮವಾರ ಕೋವಿಡ್‌ ಕೇರ್‌ ಕೇಂದ್ರದ ಕುರಿತು ಮಾತುಕತೆ ನಡೆಸಿದ ಅವರು, ಕೋವಿಡ್‌ 19ನಾ ಸೋಂಕಿತರ ಆರೈಕೆಗಾಗಿ ನಗರದ ಕೋವಿಡ್‌  ಕೇಂದ್ರಗಳಲ್ಲಿರುವ ಹಾಸಿಗೆಯ ಪ್ರಮಾಣವನ್ನು 20 ಸಾವಿರಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

Advertisement

ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ತಲಾ ಹತ್ತು ಹಾಸಿಗೆಯ ತುರ್ತು ನಿಗಾ ಘಟಕಗಳನ್ನು ಸ್ಥಾಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ  ಸೂಚಿಸಿದ್ದೇವೆ ಎಂದರು. ಸದ್ಯ 2,250 ಬೆಡ್‌ ಗಳು ಬಳಕೆಯಾಗುತ್ತಿವೆ. ರೋಗಿಗಳು ಗುಣಮುಖರಾಗಿ ಮನೆಗೆ ಹೋಗುತ್ತಿರುವುದರಿಂದ ಬೆಡ್‌ಗಳು ಖಾಲಿ ಆಗುತ್ತಿವೆ. ಮನೆಯಲ್ಲೇ ಚಿಕಿತ್ಸೆ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ.  ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಕ್ಲಬ್‌ ಹೌಸ್‌ಗಳನ್ನು ಬಳಕೆ ಮಾಡಿಕೊಂಡು ಅಲ್ಲಿಯೂ ನಮಗೆ ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಇದೆ.

ಇದಕ್ಕೆ ಅಪಾರ್ಟ್‌ಮೆಂಟ್‌ ಗಳ ಸಂಘಗಳ ಪ್ರತಿನಿಧಿಗಳು ಒಪ್ಪಿದ್ದಾರೆ ಎಂದು  ಅವರು ತಿಳಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರವನ್ನು ಜಗತ್ತಿನ ಅತಿದೊಡ್ಡ ಕೋವಿಡ್‌ ಆರೈಕೆ ಕೇಂದ್ರವಾಗಿ ಸಿದ್ಧಪಡಿಸಲಾಗಿದೆ. ಇಲ್ಲಿ ಮೂರ್‍ನಾಲ್ಕು ದಿನಗಳಲ್ಲಿ 10,100 ಹಾಸಿಗೆ ಸಿಗಲಿವೆ.  ವಾರದಲ್ಲಿ ಒಟ್ಟಾರೆ 20 ಸಾವಿರ ಬೆಡ್‌ ಲಭ್ಯವಾಗಲಿವೆ. ಇನ್ನೂ ಅಗತ್ಯಬಿದ್ದರೆ ತಿಂಗಳಾಂತ್ಯದ ವೇಳೆಗೆ ಬೆಡ್‌ಗಳ ಸಂಖ್ಯೆಯನ್ನು 30 ಸಾವಿರಕ್ಕೆ ಹೆಚ್ಚಿಸುವ ಉದ್ದೇಶವಿದೆ ಎಂದರು. ಜಿಕೆವಿಕೆಯಲ್ಲಿ 770, ಹಜ್‌ ಭವನದಲ್ಲಿ 432,  ರವಿಶಂಕರ್‌ ಗುರೂಜಿ ಆಶ್ರಮದಲ್ಲಿ 176, ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 64 ಬೆಡ್‌ಗಳು ಸಿದ್ಧ ಇವೆ.

ಜಿಕೆವಿಕೆ ಕ್ಯಾಂಪಸ್ಸಿನ ತೋಟಗಾರಿಕೆ ವಿಭಾಗದಲ್ಲಿ 450 ಬೆಡ್‌ಗಳ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ. ಕೋರಮಂಗಲ ಒಳಾಂಗಣ  ಕ್ರೀಡಾಂಗಣದಲ್ಲಿ 250 ಬೆಡ್‌ಗಳು ಸಿದ್ಧವಿದೆ. ಬೆಂಗಳೂರು ವಿವಿಯ ಬಾಲಕಿಯರ ಹಾಸ್ಟೆಲ್‌ನಲ್ಲಿ 200 ಬೆಡ್‌ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಕೋವಿಡ್‌ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿ  ಹಾಗೂ ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿ ದೆ. ಎಲ್ಲೆಡೆಗೂ ಉತ್ತಮ ಆಹಾರವನ್ನು ಪೂರೈಕೆ ಮಾಡುವುದರ ಜತೆಗೆ ವೈದ್ಯಕೀಯ ಸಿಬ್ಬಂದಿಗೆ ಹಣ್ಣು ನೀಡುವ ವ್ಯವಸ್ಥೆ ಮಾಡಲಾಗಿದೆ.  ಗುಣಮಟ್ಟದ ಜತೆಗೆ ಆಹಾರದ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಿದರು. ಶಾಸಕರು, ಅಧಿಕಾರಿಗಳು ಇದ್ದರು.

ಅಧಿಕಾರಿಗಳಿಗೆ ತರಾಟೆ!: ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಐಸಿಯು ವ್ಯವಸ್ಥೆ ಮಾಡು ವುದು ಕಷ್ಟ ಎಂದ ಆರೋಗ್ಯ ಇಲಾಖೆ ನಿರ್ದೇಶಕ ಓಂಪ್ರಕಾಶ್‌ ಪಾಟೀಲ ಅವರಿಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ತರಾಟೆಗೆ ತೆಗೆದುಕೊಂಡರು.  ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತ ರಿಸಬಹುದು ಎಂದು ಅಧಿಕಾರಿ ಹೇಳಿದರು. ಇದಕ್ಕೆ ಉತ್ತರಿಸಿದ ಅವರು, ಆಸ್ಪತ್ರೆಗೆ ಸ್ಥಳಾಂತರಿಸು ವುದು ವಿಳಂಬವಾದಾಗ ರೋಗಿಗಳಿಗೆ ಅನಾನುಕೂಲ ಆಗಬಾರದು ಎನ್ನುವ  ಕಾರಣಕ್ಕೆ ಐಸಿಯು ವ್ಯವಸ್ಥೆ ಕೋವಿಡ್‌ ಕೇಂದ್ರಗಳಲ್ಲಿಯೂ ಇರಬೇಕಾ ಗುತ್ತದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ನಿಮ್ಮಿಂದಾಗದಿದ್ದರೆ ಬೇರೆಯವರಿಂದ ಮಾಡಿಸುತ್ತೇವೆ. ಪ್ರತಿ ಕೇಂದ್ರದಲ್ಲೂ 10 ಐಸಿಯು ಹಾಸಿಗೆ  ಇರಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next