Advertisement

ವಿದ್ಯಾರ್ಥಿಗಳಿಂದ ಕೋವಿಡ್‌ ಜಾಗೃತಿ

08:44 PM Mar 24, 2021 | Team Udayavani |

ಬೀದರ: ಸನ್‌ರೈಸ್‌ ಶಿಕ್ಷಣ ಸಮೂಹ ಸಂಸ್ಥೆ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಕೋವಿಡ್‌ ಜಾಗೃತಿ ಜಾಥಾ ನಡೆಸಿದರು. ನಗರದ ಅಂಬೇಡ್ಕರ್‌ ವೃತ್ತದಿಂದ ನಯಾ ಕಮಾನ್‌ವರೆಗೆ ಜಾಥಾ ನಡೆಸಲಾಯಿತು.

Advertisement

ಕೈಯಲ್ಲಿ ಜಾಗೃತಿ ಪೋಸ್ಟರ್‌ ಹಿಡಿದಿದ್ದ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಸಾವಿರಕ್ಕೂ ಅ ಧಿಕ ಉಚಿತ ಮಾಸ್ಕ್ ಹಾಗೂ ನೀರಿನ ಬಾಟಲಿ ವಿತರಿಸಿದರು. ಸಂಸ್ಥೆ ಕಾರ್ಯದರ್ಶಿ ಮಹಮ್ಮದ್‌ ಗೌಸ್‌ ಶೇಕ್‌ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಶುರುವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹೀಗಾಗಿ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿ ತಪ್ಪದೇ ಪಾಲಿಸಬೇಕು ಎಂದರು. ಜನದಟ್ಟಣೆ ಸ್ಥಳಗಳಿಂದ ದೂರವಿರಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್‌ ಬಳಸಬೇಕು. ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆದುಕೊಳ್ಳಬೇಕು. ನೆಗಡಿ, ಕೆಮ್ಮು, ಜ್ವರ ಕಂಡರೆ ಕೂಡಲೇ ವೈದ್ಯರನ್ನು ಕಾಣಬೇಕು ಎಂದರು.

ಕೋವಿಡ್‌ನಿಂದ ಒಂದು ವರ್ಷದ ಅವಧಿ ಯಲ್ಲಿ ಜಗತ್ತು ನಲುಗಿದೆ. ಕಾರಣ, ಸಾರ್ವಜನಿಕರು ಕೋವಿಡ್‌ ನಿರ್ಲಕ್ಷಿಸಬಾರದು. ಪ್ರತಿಯೊಬ್ಬರೂ ಸುರಕ್ಷತಾ ನಿಯಮ ಪಾಲಿಸಿ, ಸರ್ಕಾರಕ್ಕೆ ಸಹಕಾರ ನೀಡಿದ್ದಲ್ಲಿ ಮಾತ್ರ ಭಾರತವನ್ನು ಕೋವಿಡ್‌ ಮುಕ್ತಗೊಳಿಸಲು ಸಾಧ್ಯವಿದೆ ಎಂದರು. ಈ ವೇಳೆ ಸಂಸ್ಥೆ ಅಧ್ಯಕ್ಷ ಮಹಮ್ಮದ್‌ ಉಮರ್‌ ಶೇಕ್‌, ಮಹಮ್ಮದ್‌ ಮುದಸ್ಸಿರ್‌ ಶೇಕ್‌, ಪ್ರಾಚಾರ್ಯ ಮಹಮ್ಮದ್‌ ಗಯಾಸ್‌, ಉಪನ್ಯಾಸಕರಾದ ಆಕಾಶ, ವಿನೀತ್‌, ಮಹಮ್ಮದ್‌ ಖಾಲೀದ್‌, ಮತಿನ್‌, ಮಹಮ್ಮದ್‌ ಅಲಿ ಫೈಜನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next