Advertisement

ರಾಜ್ಯದಲ್ಲಿ ನಿಲ್ಲದ ಕೋವಿಡ್‌ ಅಟ್ಟಹಾಸ; ಒಂದೇ ದಿನ 1839 ಹೊಸ ಪ್ರಕರಣಗಳು

09:15 PM Jul 04, 2020 | Sriram |

ಬೆಂಗಳೂರು : ಕೋವಿಡ್‌ ಸೋಂಕಿತ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಇನ್ನಷ್ಟು ಆತಂಕ ಸೃಷ್ಟಿಮಾಡುತ್ತಿದೆ.

Advertisement

ಒಂದೇ ದಿನ ರಾಜ್ಯದಲ್ಲಿ 1839 ಹೊಸ ಪ್ರಕರಣ ದಾಖಲಾಗಿದ್ದು, 42 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 1172 ಮಂದಿ ಸೋಂಕಿತರು ಪತ್ತೆಯಾಗಿದ್ದು, 24 ಸಾವು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 226 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಆರೋಗ್ಯ ಇಲಾಖೆ ನೀಡಿದ ವರದಿಯ ಪ್ರಕಾರ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್‌ ಪ್ರಕರಣ ಕಂಡು ಬಂದಿದೆ. ಅದರ ಜತೆಗೆ ಬೆಂಗಳೂರು ಇನ್ನಷ್ಟು ಅಪಾಯದಲ್ಲಿದೆ ಎಂಬುದು ಸ್ಪಷ್ಟವಾಗುತ್ತಿದೆ.

1839 ಹೊಸ ಪ್ರಕರಣ ಸೇರಿ ರಾಜ್ಯದಲ್ಲಿ ಒಟ್ಟು 21549 ಜನರಲ್ಲಿ ಸೋಂಕು ಪತ್ತೆಯಾಗಿದೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 439 ಮಂದಿ ಸೇರಿದಂತೆ ಈವರೆಗೆ 9244 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. 11966 ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೋವಿಡ್‌ ಮಹಾಮಾರಿಗೆ ರಾಜ್ಯದಲ್ಲಿ 335 ಮಂದಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 1172, ದಕ್ಷಿಣ ಕನ್ನಡದಲ್ಲಿ 75, ಬಳ್ಳಾರಿಯಲ್ಲಿ 73, ಬೀದರ್‌ನಲ್ಲಿ 51, ಧಾರವಾಡದಲ್ಲಿ 45 ಹಾಗೂ ರಾಯಚೂರಿನಲ್ಲಿ 41, ಮೈಸೂರಿನಲ್ಲಿ 38, ಕಲಬುರಗಿ ಹಾಗೂ ವಿಜಯಪುರದಲ್ಲಿ ತಲಾ 37 ಪ್ರಕರಣ ಸೇರಿ ರಾಜ್ಯದಲ್ಲಿ 1893 ಪ್ರಕರಣ ದಾಖಲಾಗಿದೆ.

Advertisement

ಬೆಂಗಳೂರು ನಗರದಲ್ಲಿ 195, ಕಲಬುರಗಿಯಲ್ಲಿ 46, ದಕ್ಷಿಣ ಕನ್ನಡದಲ್ಲಿ 26, ಬಳ್ಳಾರಿಯಲ್ಲಿ 20 ಸೇರಿ 439 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಎಚ್ಚರಿಕೆ ಗಂಟೆ
ಒಂದೇ ದಿನ 42 ಮಂದಿ ಸಾವನ್ನಪ್ಪಿರುವುದು ರಾಜ್ಯದಲ್ಲಿ ಎಲ್ಲ ರೀತಿಯಿಂದಲೂ ಎಚ್ಚರಿಕೆ ಗಂಟೆ ಭಾರಿಸಿದಂತಿದೆ. ಬೆಂಗಳೂರಿನ 24, ಧಾರವಾಡದ 3, ಬೀದರ್‌ನ 6, ಕಲಬುರಗಿಯ 3, ದಕ್ಷಿಣ ಕನ್ನಡದಲ್ಲಿ 4, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 1 ಸಾವು ಸಂಭವಿಸಿದೆ. ಕೋವಿಡ್‌ ಸತ್ತವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. 9 ಮಂದಿ ಮಾತ್ರ 50ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದಾರೆ. ಕೋವಿಡ್‌ ಲಕ್ಷಣ ಇಲ್ಲದ ಇಬ್ಬರು ಸಾವನ್ನಪ್ಪಿರುವುದು ಇನ್ನಷ್ಟು ಆತಂಕ ಸೃಷ್ಟಿಮಾಡಿದೆ. ಸತ್ತವರಲ್ಲಿ 26 ಪುರುಷರು ಹಾಗೂ 16 ಮಹಿಳೆಯರು ಸೇರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next