ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಹೊಸ್ತಿಲಲ್ಲೇ ಕೋವಿಡ್ ಮಹಾಮಾರಿ ಮತ್ತೆ ಸದ್ದು ಮಾಡುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಶನಿವಾರ ರಾಜ್ಯದಲ್ಲಿ 155 ಕೋವಿಡ್ ಕೇಸ್‌ಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ 58, ಶಿವಮೊಗ್ಗದಲ್ಲಿ 41, ಬಳ್ಳಾರಿ 9, ಹಾಸನ, ಕಲಬುರಗಿ ತಲಾ 7,ಬೆಂಗಳೂರು ಗ್ರಾಮಾಂತರ 5, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಹಾವೇರಿ ತಲಾ 2 ಕೋವಿಡ್ ಪ್ರಕರಣ ಸೇರಿದಂತೆ ಒಟ್ಟು 155 ಹೊಸ ಕೋವಿಡ್ ಸೋಂಕು ವರದಿಯಾಗಿದೆ.
ಶೂನ್ಯ ಸಾವಿನ ಸಂಖ್ಯೆ ವರದಿಯಾಗಿದ್ದು, 107 ಮಂದಿ ಬಿಡುಗಡೆಯಾಗಿದ್ದಾರೆ.
ಕರ್ನಾಟಕದಲ್ಲಿ ಇನ್ನೂ 683 ಕೋವಿಡ್ ಕೇಸ್‌ಗಳು ಸಕ್ರಿಯವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ 3 ಹೊಸ ಕೋವಿಡ್ ಕೇಸ್‌ಗಳು ದೃಢಪಟ್ಟಿವೆ. ಸೋಂಕಿತರ ಸಂಖ್ಯೆ ಏರುತ್ತಿದ್ದು, ರಾಜ್ಯದಲ್ಲಿ ಕಳೆದ 3 ದಿನಗಳಿಂದ ಪ್ರತಿ ನಿತ್ಯ ನೂರರ ಗಡಿ ದಾಟುತ್ತಿರುವುದು ಆತಂಕ ಹುಟ್ಟಿಸಿದೆ.