ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಕಾರಣದಿಂದಾಗಿ ಆರ್ಥಿಕ ಸ್ಥಿತಿ ದೊಡ್ಡ ಪ್ರಮಾಣದಲ್ಲಿ ಹದಗೆಟ್ಟಿದ್ದು, ದರ ಪರಿಣಾಮದಿಂದಾಗಿ ಜಿಡಿಪಿ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮೆಚ್ಚುಗೆ
ಇತ್ತಿಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 9.5ರಷ್ಟು ಇರಲಿದೆ ಎಂದು ಹೇಳಿತ್ತು. ದೇಶ ಕೋವಿಡ್ ನ ಮೊದಲ ಅಲೆ ಹಾಗೂ ಎರಡನೆ ಅಲೆಯ ಕಾರಣದಿಂದಲೇ ಬಹಳ ದೊಡ್ಡ ಆರ್ಥಿಕ ಹೊಡೆತವನ್ನು ಕಂಡಿತತು, ಇನ್ನು, ಮೂರನೇ ಅಲೆಯ ಹೊಡೆತಕ್ಕೆ ಸಿಲುಕಿದರೇ, ಕೇವಲ ಶೇ 7ರಷ್ಟಿರಲಿದೆ ಎಂದು ಅಭಿಜಿತ್ ಅಂದಾಜಿಸಿದ್ದಾರೆ.
ಐಎಂಎಫ್ ದೇಶದಲ್ಲಿ ಕೋವಿಡ್ ಸೋಂಕಿನ ಅಲೆ ಆರಂಭವಾಗುವುದಕ್ಕೂ ಮೊದಲು ದೇಶದಲ್ಲಿ ಶೇಕಡಾ 12.5ರಷ್ಟು ಬೆಳವಣಿಗೆ ಕಾಣಬಹುದೆಂದು ಹೇಳಿತ್ತು. ಆದರೇ, ಕೋವಿಡ್ ನ ಕಾರಣದಿಂದಾಗಿ ಇದೀಗ ಶೇಕಡಾ 9.5 ರಷ್ಟು ಇರಬಹುದೆಂದು ಹೇಳುತ್ತಿದೆ.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ಮೇಲೆ ಅತೃಪ್ತರ ತೂಗುಗತ್ತಿ… ಕಾಂಗ್ರೆಸ್ ಗೆ ವರದಾನವಾಗಲಿದೆಯೇ?