Advertisement

ಕೋವಿಡ್‌ ಮೂರನೇ ಅಲೆ ತಡೆಗೆ ಸಜ್ಜಾಗಿ

01:22 PM Jul 17, 2021 | Suhan S |

ಸಾಗರ: ಕೋವಿಡ್‌ ಸಂದರ್ಭದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಸೇವೆಯೂಅಭಿನಂದನಾರ್ಹವಾದದ್ದು. ಎಲ್ಲರೂ ತಂಡವಾಗಿ ಕೋವಿಡ್‌ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಸಜ್ಜಾಗಬೇಕು ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿ ಶುಕ್ರವಾರ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಲಸಿಕೆ ಕೇಂದ್ರದ ಸ್ವಯಂಸೇವಕರು, ಕೊರೊನಾದಿಂದ ಮೃತಪಟ್ಟ ಶವಗಳ ಸಂಸ್ಕಾರ ಮಾಡಿದವರು ಹಾಗೂ ಉಚಿತವಾಗಿ ಅನ್ನದಾಸೋಹ ಮಾಡಿದವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕೋವಿಡ್‌ ಒಂದನೇ ಅಲೆ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಂಕಷ್ಟದ ಸಂದರ್ಭದಲ್ಲಿ ನೊಂದವರಿಗೆ ಸಹಾಯ ಮಾಡಿ ಎನ್ನುವ ಕರೆ ನೀಡಿದ್ದರು. ಈ ಕರೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಬೇರೆ ಬೇರೆ ಸೇವೆಯಲ್ಲಿ ತೊಡಗಿಸಿಕೊಂಡು ನೆರವಿನ ಹಸ್ತ ಚಾಚಿದ್ದಾರೆ. ಸಾಗರ ತಾಲೂಕಿನಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೋವಿಡ್‌ ನಿಂದ ಮೃತಪಟ್ಟವರ ಶವಸಂಸ್ಕಾರವನ್ನು ಜಾತ್ಯಾತೀತವಾಗಿ ಮಾಡಿದ್ದೀರಿ.

ಹಸಿವಿನಿಂದ ಬಳಲುವವರಿಗೆ ಆಹಾರ ನೀಡಿದ್ದಾರೆ. ಲಸಿಕಾ ಕೇಂದ್ರದಲ್ಲಿ ಅನೇಕ ಟೀಕೆಗಳ ನಡುವೆಯೂ ಮ. ಸ. ನಂಜುಂಡಸ್ವಾಮಿ ಅವರ ತಂಡ ಸಮರ್ಪಕವಾಗಿ ಲಸಿಕೆ ಪೂರೈಸಲುನಿಗಾ ವಹಿಸಿದ್ದಾರೆ. ನಿಮ್ಮಂತಹವರು ಸಮಾಜಕ್ಕೆ ಮಾರ್ಗದರ್ಶಿಗಳಾಗಿ ಉಳಿಯುತ್ತೀರಿ. ಫಲಾಪೇಕ್ಷೆ ಇಲ್ಲದೆ ಸಲ್ಲಿಸುತ್ತಿರುವ ನಿಮ್ಮ ಸೇವೆ ಕೋವಿಡ್‌ ಸಂಪೂರ್ಣ ಮುಕ್ತವಾಗುವ ತನಕ ಮುಂದುವರಿಯಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೋವಿಡ್‌ ಸಂದರ್ಭದಲ್ಲಿ ಸೇವೆ ಸಲ್ಲಿಸಿದಬಿ.ಎಚ್‌. ಲಿಂಗರಾಜ್‌, ಸಂತೋಷ್‌ ಶೇಟ್‌, ಸತೀಶ್‌ ಆರ್‌., ರಾಜೇಶ್‌ಶೆಟ್ಟಿ, ಗುರುಪ್ರಸಾದ್‌, ಮಂಜುಭಟ್ಟ, ಪರಶುರಾಮ್‌, ರಾಘವೇಂದ್ರ,ರಂಜನಿ, ಶಶಿಕಲಾ, ಪ್ರವೀಣ್‌ ಅವರನ್ನು ಸನ್ಮಾನಿಸಲಾಯಿತು.

Advertisement

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್‌, ಉಪಾಧ್ಯಕ್ಷ ವಿ. ಮಹೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷಡಿ. ತುಕಾರಾಮ್‌, ಪ್ರಮುಖರಾದಮ.ಸ. ನಂಜುಂಡಸ್ವಾಮಿ, ರಾಜುಬಿ. ಮಡಿವಾಳ, ಅಭಿಷೇಕ್‌, ಪವನ್‌, ಡಾ| ಮೋಹನ್‌ ಕೆ.ಎಸ್‌.,ಡಾ| ವಾಸುದೇವ ಪ್ರಭು ಇನ್ನಿತರರುಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next