Advertisement
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಆವರಿಗೆ ಪತ್ರ ಬರೆದು, ಎರಡು ತಿಂಗಳಲ್ಲಿ ಲಸಿಕೆ ಅಭಿಯಾನ ಮುಗಿಸಬೇಕಿದೆ. ಲಸಿಕೆ ಕೇಂದ್ರದಿಂದಾದರೂ ತರಿಸಿಕೊಳ್ಳಬೇಕು, ಇಲ್ಲವೇ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Related Articles
Advertisement
10 ಸಾವಿರ ರೂ. ವಿಶೇಷ ಪ್ಯಾಕೇಜ್ ನೀಡಿ ಬೆಂಗಳೂರು: ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದವರಿಗೆ ರಾಜ್ಯ ಸರ್ಕಾರ ತಕ್ಷಣ ಪ್ರತಿ ಕುಟುಂಬಕ್ಕೆ 10 ಸಾವಿರ ರೂ.ನೆರವು ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ತರಕಾರಿ, ಹಣ್ಣು, ಹೂವು ಬೆಳೆದ ರೈತರಿಂದ ಖರೀದಿಯಾಗುತ್ತಿಲ್ಲ. ಕೃಷಿ, ತೋಟಗಾರಿಕೆ ಸಚಿವರು ಯಾವ ರೈತರ ಬಳಿ ಹೋಗಿ ಕಷ್ಟ ಕೇಳಿದ್ದಾರೆ? ಎಪಿಎಂಸಿಗಳಿಗೆ ಭೇಟಿ ಕೊಟ್ಟು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಒಬ್ಬ ಸಚಿವರು ಬಡವರಿಗೆ ನೆರವು ನೀಡಲು ನೋಟಿನ ಪ್ರಿಟಿಂಗ್ ಯಂತ್ರ ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ. ಹಿಂದೆ ಅವರು ನೋಟು ಎಣಿಸುವ ಯಂತ್ರ ಮನೆಯಲ್ಲಿ ಇಟ್ಟುಕೊಂಡಿರಲಿಲ್ಲವೇ? ಎಂದು ಸಚಿವ ಈಶ್ವರಪ್ಪ ಹೇಳಿಕೆಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿ, ನಿಮಗೆ ಪರಿಹಾರ ಕೊಡಲು ಆಗದಿದ್ದರೆ ಸರ್ಕಾರದ ಬಳಿ ದುಡ್ಡು ಇಲ್ಲ ಆಗಲ್ಲ ಎಂದು ಹೇಳಿ. ನೀವು ಲಾಕ್‌ಡೌನ್ ಮಾಡಿರುವುದಕ್ಕೆ ಜನರು ಕೇಳುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಕೋಮುವಾದದ ವಿಷ ಬೀಜಕ್ಕೆ ಇರುವ ಮೊತ್ತೂಂದು ಹೆಸರು ತೇಜಸ್ವಿ ಸೂರ್ಯ. ಮಾಧ್ಯಮಗಳ ಮುಂದೆ ಮುಸ್ಲಿಂರ ಹೆಸರು ಓದಿ ಇದೀಗ ಅಧಿಕಾರಿಗಳನ್ನು ಸಿಲುಕಿಸಲು ನೋಡುತ್ತಿದ್ದಾರೆ ಎಂದು ದೂರಿದರು.