Advertisement
ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಎರಡನೇ ಅಲೆಯಿಂದಾಗಿ ಇಂಡಿಗೋ ತನ್ನ ಹಿರಿಯ ಉದ್ಯೋಗಿಗಳಿಗೆ ಸೆಪ್ಟೆಂಬರ್ ವರೆಗೆ ತಿಂಗಳಿಗೆ ನಾಲ್ಕು ದಿನಗಳು ವೇತನರಹಿತವಾಗಿ ಕಡ್ಡಾಯ ರಜೆ (ಎಲ್ ಡಬ್ಲ್ಯು ಪಿ) ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
Related Articles
Advertisement
ವಿಮಾನಯಾನದ ಬಹುಪಾಲು ಉದ್ಯೋಗಿಗಳು ಬ್ಯಾಂಡ್ ಬಿ ಮತ್ತು ಬ್ಯಾಂಡ್ ಎ ನಲ್ಲಿದ್ದಾರೆ, ಅವುಗಳು ಕೆಳಮಟ್ಟದ ಬ್ಯಾಂಡ್ ಗಳಾಗಿವೆ. ಹೀಗಾಗಿ 2021ರ ಜೂನ್ 1 ರಿಂದ ಮುಂದಿನ 3 ತಿಂಗಳವರೆಗೆ ಅಂದರೇ, ಸಂಪ್ಟೆಂಬರ್ ತನಕ ತಿಂಗಳಲ್ಲಿ 4 ದಿನಗಳ ಕಡ್ಡಾಯ ವೇತನವಿಲ್ಲದೆ ರಜೆ ತೆಗೆದುಕೊಳ್ಳಬೇಕೆಂದು ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ಇಮೇಲ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಾನವೀಯತೆ ಮೆರೆಯುವ ಸಮಯ, ರಾಜಕೀಯ ಮಾಡುವುದು ಸರಿಯಲ್ಲ ರೇಣುಕಾಚಾರ್ಯ
ಇನ್ನು, ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ ಕಳೆದ ವಾರ ನಿರ್ಧರಿಸಿದೆ.
40 ನಿಮಿಷಗಳಿಂತ ಕಡಿಮೆ ಅವಧಿ ಇರುವ ದೇಶದ ಒಳಗಿನ ವಿಮಾನಯಾನದ ವೆಚ್ಚ ದುಬಾರಿಯಾಗಲಿದ್ದು, 2,300 ರೂಪಾಯಿಗಳಿಂದ 2,600 ರೂಪಾಯಿಗಳಿಗೆ ಏರಿಸಲಾಗಿದೆ. ಈಗಿರುವ ದರದ ಶೇಕಡಾ 13 ರಷ್ಟು ಹೆಚ್ಚಾಗಿದೆ.
2,900 ರೂ ವೆಚ್ಚದಲ್ಲಿ 40 ನಿಮಿಷದಿಂದ ಒಂದು ಗಂಟೆಯ ನಡುವಿನ ವಿಮಾನಯಾನವನ್ನು 3,300 ರೂ. ಗೆ ಏರಿಸಲಾಗಿದೆ. ಇನ್ನು, 60 ರಿಂದ 90 ನಿಮಿಷಗಳ ನಡುವಿನ ವಿಮಾನಯಾನಕ್ಕೆ 4,000 ರೂ, 90 ರಿಂದ 120 ನಿಮಿಷಗಳ ವಿಮಾನಯಾನಕ್ಕೆ 4,700 ರೂ, 150 ರಿಂದ 180 ನಿಮಿಷಗಳ ವಿಮಾನ ಯಾನಕ್ಕೆ 6,100 ರೂ. ಹಾಗೂ 180 ರಿಂದ 210 ನಿಮಿಷಗಳ ವಿಮಾನಯಾನಕ್ಕೆ 7,400 ರೂ. ನಿಗದಿಪಡಿಸಲು ಸಚಿವಾಲಯ ನಿರ್ಧರಿಸಿತ್ತು.
ಇದನ್ನೂ ಓದಿ : ದೆಹಲಿ: ಕಳೆದ 24ಗಂಟೆಗಳಲ್ಲಿ 487 ಕೋವಿಡ್ ಪ್ರಕರಣ ಪತ್ತೆ, 45 ಮಂದಿ ಸಾವು