Advertisement

ಇಂಡೋನೇಷ್ಯಾ: ಕೋವಿಡ್‌ ರೂಪಾಂತರ ವೈರಸ್‌ ಪತ್ತೆ

11:12 AM Aug 31, 2020 | Nagendra Trasi |

ಮಣಿಪಾಲ: ಇಂಡೋನೇಷ್ಯಾ ದಲ್ಲಿ ಕೋವಿಡ್‌ನ‌ ಮತ್ತೂಂದು ರೂಪಾಂತರ ಪತ್ತೆಯಾಗಿದೆ. ಇದನ್ನು ಜಕಾರ್ತಾದ ಅಜೆಕ್ಮನ್‌ ಇನ್‌ ಸ್ಟಿಟ್ಯೂಟ್‌ ಫಾರ್‌ ಮಾಲಿಕ್ಯುಲರ್‌ ಬಯಾಲಜಿ ವರದಿ ಮಾಡಿದೆ.

Advertisement

ವೈರಸ್‌ನ ಈ ಆವೃತ್ತಿಯು ತುಂಬಾ ಮಾರಕವಲ್ಲವಾಗಿದ್ದರೂ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ರೋಗಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ಕೋವಿಡ್‌ನ‌ ಡಿ 614 ಜಿ ರೂಪಾಂತರ ಕಂಡುಬಂದಿದ್ದು, ದೇಶದಲ್ಲಿ ಇತ್ತೀಚೆಗೆ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ  ಎಂದು ಸಂಸ್ಥೆಯ ಉಪನಿರ್ದೇಶಕ ಹೆರಾವತಿ ಸುಡೋ ಹೇಳಿದ್ದಾರೆ.

ಇದಕ್ಕೆ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ  ಅಧ್ಯಯನಗಳು ಅಗತ್ಯವಾಗಿವೆ. ರವಿವಾರ ಹೊಸದಾಗಿ 2858 ಸೋಂಕು ಪ್ರಕರಣಗಳು ವರದಿಯಾಗಿವೆ.
ಈ ವರೆಗೆ ಒಂದು ಲಕ್ಷ 72 ಸಾವಿರ 53 ಪ್ರಕರಣಗಳು  ವರದಿಯಾಗಿದ್ದು, 7343 ಜನರು ಸಾವನ್ನಪ್ಪಿದ್ದಾರೆ.

ಬ್ರಿಟನ್‌ ಸರಕಾರದ ವರದಿ ಸೋರಿಕೆ
ಬ್ರಿಟನ್‌ನ ಕೋವಿಡ್‌ ಗೆ ಸಂಬಂಧಿಸಿದ ಸರಕಾರ ವರದಿಯನ್ನು ಬಹಿರಂಗಪಡಿಸಲಾಗಿದೆ. ಬಿಬಿಸಿನಲ್ಲಿನ ವರದಿಯ ಪ್ರಕಾರ, ಚಳಿಗಾಲದ ವೇಳೆಗೆ ದೇಶದಲ್ಲಿ
85,000 ಜನರು ಸಾಯಬಹುದು ಎಂಬುದು ಉಲ್ಲೇಖವಾಗಿದೆ.

ನವೆಂಬರ್‌ನಿಂದ ಮಾರ್ಚ್‌ ವರೆಗೆ ದೇಶದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಹುದಾಗಿದೆ. ಲಂಡನ್‌ನಲ್ಲಿ ಎರಡನೇ ತರಂಗ ಕೋವಿಡ್‌ 19 ಗಂಭೀರಗೊಳ್ಳುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನಂತರ ಲಾಕ್‌ಡೌನ್‌ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಪ್ರಕರಣಗಳು ತ್ವರಿತವಾಗಿ ಹೆಚ್ಚಾದರೆ ಮತ್ತೆ ಕಟ್ಟುನಿಟ್ಟಾದ ಲಾಕ್‌ಡೌನ್‌ ಜಾರಿಗೊಳ್ಳುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next