Advertisement

ಕೋವಿಡ್ 19 ವಾರ್ಡ್‌ ಪರಿಶೀಲಿಸಿದ ಡೀಸಿ ಅರ್ಚನಾ

04:45 PM Apr 19, 2020 | Suhan S |

ಚನ್ನಪಟ್ಟಣ: ರಾಮನಗರ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಕೋವಿಡ್ 19 ವೈರಸ್‌ ಸೋಂಕಿತರಿಗಾಗಿಯೇ ನಿರ್ಮಾಣವಾಗಿರುವ ವಾರ್ಡ್ ಗಳನ್ನು ಪರಿಶೀಲಿಸಿದರು. ಆಸ್ಪತ್ರೆಯ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಯವರ ಜೊತೆ ಚರ್ಚೆ ನಡೆಸಿದರು.

Advertisement

ಆಸ್ಪತ್ರೆಯನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದರ ಜೊತೆಗೆ ಅತ್ಯಾಧುನಿಕ ಚಿಕಿತ್ಸಾ ಕೊಠಡಿ ವೀಕ್ಷಣೆ ಮಾಡಿ, ಆಸ್ಪತ್ರೆಯ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೋವಿಡ್ 19 ವೈರಸ್‌ ಸೋಂಕು ಇಲ್ಲದಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾದರೆ ಆಸ್ಪತ್ರೆಯಲ್ಲಿ ಯಾವ ರೀತಿ ಎಚ್ಚರವಾಗಿರಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬರುವಾಗ ಒಂದು ದಾರಿ ಹೋಗುವಾಗವುದು ದಾರಿ ವ್ಯವಸ್ಥೆ ಮಾಡುವುದರ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಆರೋಗ್ಯ ಇಲಾಖೆ ಕೋವಿಡ್ 19 ವೈರಸ್‌ ನಿಯಂತ್ರಣಗಳಲ್ಲಿ ಸಂಪೂರ್ಣ ಅಲರ್ಟ್‌ ಆಗಿರುವುದು ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮನಗಾಣಲು ಸಾಧ್ಯವಿಲ್ಲ. ಯಾವುದಕ್ಕೂ ಮುಂಜಾಗ್ರತೆ ಅವಶ್ಯಕ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ವಿಜಯ ನರಸಿಂಹ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜು, ಆಸ್ಪತ್ರೆ ಆಡಳಿತಾಧಿಕಾರಿ ಮಂಜೇಶ್‌ಕುಮಾರ್‌, ಶುಶ್ರೂಷಕಿಯರ ಅಧೀಕ್ಷಕಿ ಸರಸ್ವತಿ, ಆಸ್ಪತ್ರೆ ಹಿರಿಯ ಫಾರ್ಮಸಿಸ್ಟ್‌ ವೇದಮೂರ್ತಿ ಹಾಗೂ ಹಲವಾರು ಮಂದಿ ವೈದ್ಯರು ಸಿಬ್ಬಂದಿ ವರ್ಗ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next