ನಿರ್ವಹಿಸುತ್ತಿರುವ ಜಿಲ್ಲಾಡಳಿತದ ವಿವಿಧ ತಂಡಗಳಿಗೆ ಆಶಾ ಕಾರ್ಯ ಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾಥ್ ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗ
ಗಳಲ್ಲಿ ತಳಮಟ್ಟದ ಆರೋಗ್ಯ ಸೇನಾನಿಗಳಾಗಿ ಮುಂಚೂಣಿಯಲ್ಲಿ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ.
Advertisement
15 ದಿನಗಳ ಹಿಂದೆಯೇತಮಗೆ ನೀಡಲಾದ ವಿಶೇಷ ತರಬೇತಿ, ಮಾರ್ಗದರ್ಶಿ ಸೂತ್ರಗಳನ್ನಾಧರಿಸಿ ಕಾರ್ಯ ಕ್ಷೇತ್ರಕ್ಕೆ ಇಳಿದಿರುವ ಆಶಾ ಕಾರ್ಯರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಗೆ ಸ್ಥಳೀಯ ಸಂಪರ್ಕ ಕೊಂಡಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಕರಪತ್ರ ವಿತರಣೆ, ಮನೆ ಮನೆಗಳಲ್ಲಿ ಜಾಗೃತಿಯ ಕೆಲಸಗಳನ್ನು ಮಾಡಿರುವ ಆಶಾ ಕಾರ್ಯಕರ್ತೆಯರು ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ವಿಶೇಷ ನಿಗಾ ಕಾರ್ಯದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳಿಗೆ ನೆರವಾಗುತ್ತಿದ್ದಾರೆ. ಗುಲಾಬಿ ಬಣ್ಣದ ಸಮವಸ್ತ್ರಧಾರಿ ಆಶಾ ಕಾರ್ಯಕರ್ತೆ ಯರು ಕೆಲವೆಡೆ ಏಕಾಂಗಿಗಳಾಗಿ, ಕೆಲವೆಡೆ ತಂಡಗಳಲ್ಲಿ ಕೊಡುಗೆ ಸಲ್ಲಿಸುತ್ತಿದ್ದಾರೆ.
ಕ್ವಾರಂಟೈನ್ ಕುರಿತ ಪ್ರಾಥಮಿಕ ಮಾಹಿತಿಯನ್ನು ಇಲಾಖೆಗಳಿಗೆ ರವಾನಿಸಿ ಸಮನ್ವಯ ಸಾಧಿಸಲು ನೆರವಾಗುತ್ತಿದ್ದಾರೆ. ಕೆಲವೆಡೆ ಹೋಂ ಕ್ವಾರಂಟೈನ್‌ನಲ್ಲಿರುವವರ ಆಹಾರ ಆವಶ್ಯಕತೆಗಳನ್ನು ಇತರ ಸಂಘ- ಸಂಸ್ಥೆಗಳ ನೆರವಿನೊಂದಿಗೆ ಪೂರೈಸುವ ಕೆಲಸವನ್ನು ಕೂಡ ಅವರು ಮಾಡುತ್ತಿದ್ದಾರೆ. 1,335 ಮಂದಿ ಆಶಾ ಕಾರ್ಯಕರ್ತೆಯರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 1,335ಕ್ಕೂ ಅಧಿಕ ಮಂದಿ ಆಶಾ ಕಾರ್ಯ ಕರ್ತೆಯರು ಕೋವಿಡ್-19 ತಡೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ
ತಲಾ 5 ಮಂದಿ ಮೆಂಟರ್(ಆಶಾ ಸೂಪರ್‌ವೈಸರ್‌ಗಳುಗಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1,000ಕ್ಕೂ ಅಧಿಕ ಮಂದಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಜತೆಗೂಡಿ ಸೇವೆ ಸಲ್ಲಿಸು
ತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದ ವರೆಗೆ 3,20,359 ಮನೆಗಳಿಗೆ ಭೇಟಿ ನೀಡಿ 13,17,439 ಮಂದಿಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 96,446 ಮನೆಗಳಿಗೆ ಭೇಟಿ ನೀಡಿ 4,14,719 ಮಂದಿಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ತಮ್ಮ ವೇತನಕ್ಕಾಗಿ ಬೀದಿಗಿಳಿದು ಹೋರಾಟ ನಡೆ ಸಿದ್ದ ಆಶಾ ಕಾರ್ಯಕರ್ತೆಯರು ಈಗ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ!
ಇತರ ಆರೋಗ್ಯಸಿಬಂದಿಯಂತೆ ಅವರ ಸೇವೆಯೂ ಮಹತ್ವದ್ದು ಎಂಬುದು ಈ ಸಂದರ್ಭ ದಲ್ಲಿ ಮತ್ತೂಮ್ಮೆ ಸಾಬೀತಾಗಿದೆ.
Related Articles
Advertisement
ರಾಜ್ಯದಲ್ಲಿ 62 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಅವರೆಲ್ಲರೂ ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ಅಧಿಕಾರಿಗಳ ಜತೆ ಕೆಲಸ ಮಾಡುತ್ತಿದ್ದಾರೆ. ಮಂಗಳೂರು ನಗರದ ಕೆಲವೆಡೆ ಹೋಂ ಕ್ವಾರಂಟೈನ್‌ನಲ್ಲಿದ್ದು ಅಗತ್ಯ ವಸ್ತುಗಳಿಗೆ ಪರದಾಡುತ್ತಿರುವವರ ಮಾಹಿತಿ ನಮಗೆ ದೊರೆಯಿತು. ಕೂಡಲೇ ನಮ್ಮ ಸಂಪರ್ಕದಲ್ಲಿರುವ ಸೇವಾ ಸಂಸ್ಥೆಗಳ ಮೂಲಕ ನೆರವು ಒದಗಿಸಿಕೊಟ್ಟಿದ್ದೇವೆ.– ಜಯಲಕ್ಷ್ಮೀ ಬಿ.ಆರ್., ರಾಜ್ಯಾಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರ ಸಂಘ