Advertisement

ಪ್ರಾಣಿಗಳಿಗೂ ಈಗ ಕೋವಿಡ್ 19 ಸಂಕಷ್ಟ

06:52 PM Apr 03, 2020 | Suhan S |

ಶಿವಮೊಗ್ಗ:  ಕೋವಿಡ್ 19 ಲಾಕ್‌ಡೌನ್‌ನಿಂದ ಜನರಷ್ಟೇ ಅಲ್ಲ. ಪ್ರಾಣಿಗಳೂ ಸಂಕಷ್ಟಕ್ಕೆ ಸಿಲುಕಿವೆ. ಜನರು ಮನೆ ಬಿಟ್ಟು ಹೊರಬಾರದೆ ಇರುವುದರಿಂದ ಬೀದಿ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವು ನೀಗಿಸಿಕೊಳ್ಳಲು ಈ ಮೂಕಪ್ರಾಣಿಗಳು ಕಷ್ಟಪಡುತ್ತಿವೆ. ಆದರೆ ಲಾಕ್‌ಡೌನ್‌ ನಡುವೆಯೂ ಶಿವಮೊಗ್ಗದ ಪ್ರಾಣಿ ಪ್ರಿಯರ ತಂಡವೊಂದು ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿದೆ.

Advertisement

ನಗರದ ವಿವಿಧೆಡೆ ಸಂಚರಿಸುವ ಈ ತಂಡ ಬೀದಿ ನಾಯಿಗಳಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. 75ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಈ ತಂಡ ಪ್ರತಿದಿನ ಆಹಾರ ನೀಡುತ್ತಿದೆ. ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಜನರು ತಮ್ಮ ಮನೆಗೆ ದಿನಸಿ, ತರಕಾರಿ ಎಂದು ಅಂಗಡಿ ಮುಂದೆ ಕ್ಯೂ ನಿಂತರು. ಆದರೆ ನಗರದ ಹರ್ಷ ಮತ್ತು ಅವರ ಪತ್ನಿ ಬೀದಿ ನಾಯಿಗಳಿಗೆ ಹಸಿವಿನ ಕುರಿತು ಯೋಚಿಸಿ, ಆಹಾರ ಪೂರೈಸಲು ಆರಂಭಿಸಿದರು.

ಪ್ರತಿದಿನ ಬೆಳಗ್ಗೆ ಆಹಾರ ಸಿದ್ಧಪಡಿಸಿ ತಾವೇ ಹೋಗಿ ಅವುಗಳಿಗೆ ಆಹಾರ ಕೊಟ್ಟು ಬರುತ್ತಿದ್ದಾರೆ. ಆರಂಭದಲ್ಲಿ ಸುಮಾರು 35 ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಈಗ ಇವರ ತಂಡ ದೊಡ್ಡದಾಗಿದೆ. ಕೆನಿತ್‌ ಹರ್ಷ ಅವರ ಜೊತೆಗೆ ನೈನಾ, ಬಿಂದೂ ರಾಣಿ, ನಿಖೀಲ್‌ ರೇನುನಾತನ್‌, ಸಬೀಹ ಶಿರ್ಕೋಲ್‌, ಮಂಜು ದೊಡ್ಮನೆ, ಸಂಹಿತಾ ಹೀಗೆ ಏಳು ಮಂದಿ ಪ್ರಾಣಿಪ್ರಿಯರು ಒಗ್ಗೂಡಿದ್ದಾರೆ. ಏಳು ಮಂದಿ ಪ್ರಾಣಿಪ್ರಿಯರು ಎರಡು ಟೀಂ ಮಾಡಿಕೊಂಡು, ನಗರದ ವಿವಿಧೆಡೆಗೆ ತೆರಳಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಇವರ ಕೆಲಸ ಆರಂಭವಾಗಲಿದೆ. ಆಲ್ಕೊಳ, ಆಟೋ ಕಾಂಪ್ಲೆಕ್ಸ್‌, ವಿನೋಬನಗರ, ಗೋಪಾಲಗೌಡ ಬಡಾವಣೆ, ಜೆ.ಎಚ್‌.ಪಟೇಲ್‌ ಬಡಾವಣೆ, ಸೋಮಿನಕೊಪ್ಪ ಸುತ್ತಮುತ್ತಲು ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈ ತಂಡದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಲಭಿಸಿದೆ. ನಾಯಿಗಳಿಗೆ ಪ್ರತ್ಯೇಕ ಪ್ಲೇಟ್‌ ಅಥವಾ ಅಡಕೆ ಹಾಳೆಯಲ್ಲಿ ಊಟ ಕೊಡುತ್ತಾರೆ. ಅವುಗಳು ಊಟ ಮುಗಿಸಿದ ಮೇಲೆ ಪ್ಲೇಟನ್ನು ತೊಳೆದು, ಮತ್ತೂಂದು ಜಾಗಕ್ಕೆ ತೆರಳುತ್ತಾರೆ. ಎಲ್ಲೆಂದರಲ್ಲಿ ಪ್ಲೇಟ್‌ ಬಿಸಾಡಿದರೆ ಪರಿಸರ ಹಾಳಾಗಲಿದೆ ಅನ್ನುತ್ತಾರೆ ತಂಡದ ಸದಸ್ಯರು. ಇನ್ನು, ಈ ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಾರ್ವಜನಿಕರು ಡೊನೇಷನ್‌ ನೀಡಲು ಮುಂದಾಗಿದ್ದಾರೆ. ಆದರೆ ಹಣದ ರೂಪದ ಡೊನೇಷನ್‌ ಬೇಡ. ಬದಲಾಗಿ ಅಕ್ಕಿ, ಮೊಸರು, ಡಾಗ್‌ ಫುಡ್‌ ಕೊಡುವುದಿದ್ದರೆ ಸ್ವೀಕರಿಸುತ್ತೇವೆ ಅಂತಾರೆ ತಂಡ ನಿಖೀಲ್‌. ಈ ಪ್ರಾಣಿ ಪ್ರಿಯರುನ್ನು ಸಂಪರ್ಕಿಸಲು ಮೊ: 9886212111 ಸಂಪರ್ಕಿಸಬಹುದು

Advertisement

Udayavani is now on Telegram. Click here to join our channel and stay updated with the latest news.

Next