Advertisement
ಮೊದಲ ಹಂತದ ಲಾಕ್‌ಡೌನ್ ಜಾರಿಗೂ ಮೊದಲೇ ಮಂಗಳೂರಿನಲ್ಲಿ ರಿಕ್ಷಾ, ಟ್ಯಾಕ್ಸಿ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಈಗ ಎರಡನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಮೇ 3ರ ವರೆಗೂ ರಿಕ್ಷಾ, ಟ್ಯಾಕ್ಸಿಗಳು ರಸ್ತೆಗಿಳಿಯು ವಂತಿಲ್ಲ. ಇದರಿಂದ ಸಾವಿರಾರು ಮಂದಿ ಉದ್ಯೋಗ ವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಅಥವಾ ಹಂಪನ ಕಟ್ಟೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್ ಸಹಿತ ಬಹುಭಾಗಗಳಲ್ಲಿ ರಾತ್ರಿ-ಹಗಲು ಪಾಳಿಯಲ್ಲಿ ದುಡಿಯುವ ಸಾವಿರಾರು ರಿಕ್ಷಾದವರಿಗೆ ಈಗ ದಿನದೂಡುವುದೇ ಕಷ್ಟ ವಾಗಿದೆ. ಆದಾಯವಿಲ್ಲದೆ ಹೊಟ್ಟೆ ತುಂಬಿ ಸುವುದೇ ಕಷ್ಟವಾಗಿದೆ. ಅವರು ಬದುಕಿಗಾಗಿ ಹೋರಾಡುವ ಕಾಲ ಬಂದಿದೆ. ಇದೇ ಸ್ಥಿತಿ ಟ್ಯಾಕ್ಸಿ ಚಾಲಕರದ್ದೂ ಆಗಿದೆ.
ಜನಪ್ರತಿನಿಧಿಗಳು ತತ್‌ಕ್ಷಣಕ್ಕೆ ಕೆಲವ ರಿಗೆ ಆಹಾರ ಕಿಟ್ ಒದಗಿಸಿದ್ದಾರೆ. ಆದರೆ ಶಾಶ್ವತವಾಗಿ ಅವರ ಬದುಕು ಕಟ್ಟಿಕೊಳ್ಳಲು ಯಾರೂ ನೆರವಾಗಲು ಸಾಧ್ಯವಿಲ್ಲ; ಜತೆಗೆ, ಬ್ಯಾಂಕ್‌ನಲ್ಲಿ ಸಾಲ ಮಾಡಿರುವ ಚಾಲಕರಿಗೆ ಇಎಂಐ ಕಟ್ಟುವಂತೆ ಈಗಲೂ ಬ್ಯಾಂಕ್‌ನವರು ಪೀಡಿಸುತ್ತಿದ್ದಾರೆ. ಹೀಗಾಗಿ ಒಂದೆಡೆ ಊಟದ ಚಿಂತೆಯಾದರೆ, ಇನ್ನೊಂ ದೆಡೆ ಸಾಲದ ಕಾಟದಿಂದ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ.
Related Articles
ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರ ಪೈಕಿ ಬಹುತೇಕರು ಬ್ಯಾಂಕಿನಿಂದ ಸಾಲ ಪಡೆದವರು. ಆರ್‌ಬಿಐ ಇಎಂಐ ಪಾವತಿಸಲು ಮೂರು ತಿಂಗಳ ವಿನಾಯಿತಿ ನೀಡಿದೆ. ಆದರೆ, ಕೆಲವು ಬ್ಯಾಂಕ್‌ಗಳಿಂದ ಈಗಾಗಲೇ ಸಾಲಗಾರರಿಗೆ ನೋಟಿಸ್ ನೀಡಲಾಗಿದೆ. ಕಂತು ಪಾವತಿಸುವಂತೆ ಸಂದೇಶ ಬರುತ್ತಿದೆ. ಹೀಗಾಗಿ ನಿತ್ಯದ ದುಡಿದು ಬದುಕುವವರು ಈಗ ಊಟಕ್ಕೆ ಪರದಾಡುವ ಜತೆಗೆ ಸಾಲದ ಕಂತು ಪಾವತಿಸುವ ತಲೆಬಿಸಿಯಲ್ಲಿದ್ದಾರೆ.
Advertisement
”ಟ್ಯಾಕ್ಸಿ ನಂಬಿದವರ ಬದುಕು ಬೀದಿಗೆ’ಟ್ಯಾಕ್ಸಿಯನ್ನೇ ನಂಬಿಕೊಂಡ ಚಾಲಕರ ಪರಿಸ್ಥಿತಿ ಇಂದು ಹೇಳತೀರದಾಗಿದೆ. ಅವರ ಸಂಕಷ್ಟದ ಬದುಕಿಗೆ ಸರಕಾರ ಬೆಂಗಾವಲಾಗಿ ನಿಂತರೆ ಉಪಕಾರವಾದೀತು. ಇಲ್ಲವಾದರೆ, ಟ್ಯಾಕ್ಸಿಯನ್ನೇ ನಂಬಿದವರು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಬೀದಿಗೆ ಬೀಳುವ ಪರಿಸ್ಥಿತಿಯಿದೆ.
– ನಾಗಪ್ಪ ಬಿ.ಅಡ್ಯಾರ್
ಉಪಾಧ್ಯಕ್ಷ, ಟ್ಯಾಕ್ಸಿಮ್ಯಾನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಸರಕಾರ ಸಹಾಯ ಮಾಡಲಿ
ರಿಕ್ಷಾದಿಂದಲೇ ನಾವು ಜೀವನ ನಿರ್ವಹಿಸುತ್ತಿದ್ದೇವೆ. ಈಗ ಲಾಕ್‌ಡೌನ್‌ನಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಕೋವಿಡ್ 19 ದೂರವಾಗಲಿ ಎಂಬುದು ನಮ್ಮ ಮೊದಲ ಪ್ರಾರ್ಥನೆ. ಲಾಕ್‌ಡೌನ್ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸರಕಾರ ನಮ್ಮ ಬದುಕಿಗೆ ಸಹಕಾರ ಮಾಡಿದರೆ ಸ್ವಲ್ಪ ಆಧಾರವಾಗುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ.
– ಚಂದ್ರಹಾಸ್, ರಿಕ್ಷಾ ಚಾಲಕರು, ಮೋರ್ಗನ್‌ಗೆàಟ್