Advertisement
ಕೋವಿಡ್ ವಿರುದ್ಧ ಸಮರ ಸಾರಿರುವ ಸರ್ಕಾರ ಲಸಿಕಾ ಅಭಿಯಾನ ಪ್ರಾರಂಭಿಸಿದೆ. ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ.
- ಡಿ ಹೈಡ್ರೆಷನ್‍ನಿಂದ ತಪ್ಪಿಸಿಕೊಳ್ಳಲು ನಿತ್ಯ ಜಾಸ್ತಿ ನೀರು ಸೇವಿಸಿ
- ಪ್ರತಿ ದಿನ ಮುಂಜಾನೆ ಯೋಗಾಸನ ಮಾಡಿ. ಅದರಲ್ಲೂ ಕನಿಷ್ಠ 30 ನಿಮಿಷಗಳ ವರೆಗೆ ಪ್ರಾಣಾಯಾಮ ಮಾಡಿ
- ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಬೆಳ್ಳೊಳ್ಳಿಯನ್ನು ಹೆಚ್ಚೆಚ್ಚು ಬಳಸಿ
- ಜಂಕ್ ಫುಡ್‍ನಿಂದ ದೂರವಿರಿ. ಪೋಷಕಾಂಶಯುಕ್ತ ಡ್ರೈ ಫ್ರ್ಯೂಟ್ಸ್ ಸೇವಿಸಿ. ಹಾಗೂ ನಿತ್ಯ ಕನಿಷ್ಠ 7 ರಿಂದ 8 ಗಂಟೆಗಳ ವರೆಗೆ ನೆಮ್ಮದಿಯಾಗಿ ನಿದ್ದೆ ಮಾಡಿ
- ನೈರ್ಮಲ್ಯ ಕಾಪಾಡಿಕೊಳ್ಳಿ, ಸೋಪು ಹಚ್ಚಿ ಕನಿಷ್ಠ 20 ಸೆಕೆಂಡ್‍ಗಳ ವರೆಗೆ ಕೈ ತೊಳೆದುಕೊಳ‍್ಳಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಹೊರಗಡೆ ಹೋಗುವ ಮುನ್ನ ತಪ್ಪದೆ ಮಾಸ್ಕ್ ಧರಿಸಿ( ಮನೆಯಲ್ಲಿ ಸಿದ್ಧಪಡಿಸಲಾದ ಮಾಸ್ಕ್ ಧರಿಸುವುದು ಇನ್ನೂ ಉತ್ತಮ)
- ಪ್ರತಿ ದಿನ ಮುಂಜಾನೆ 10 ಗ್ರಾಂನಷ್ಟು ಚಾವನ್‍ಪ್ರಾಶ್ ಸೇವಿಸಿ ( ಡಯಾಬಿಟಿಸ್ ಕಾಯಿಲೆ ಹೊಂದಿರುವವರು ಸಕ್ಕರೆ ರಹಿತ ಚಾವನ್‍ಪ್ರಾಶ ಸೇವಿಸುವುದು ಉತ್ತಮ)
- ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿಯಿಂದ ತಯಾರಿಸಿದ ಚಹಾ ಸೇವಿಸಿ
- ಮೂಗಿನ ಹೊಳ್ಳೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ತುಪ್ಪ ಹಚ್ಚಿಕೊಳ್ಳಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖಜೂರ್ ಸೇವಿಸಿ. ಸಾಬೂದಾನಿ ಬಾರ್ಲಿ ಹಾಗೂ ಹೆಚ್ಚೆಚ್ಚು ತರಕಾರಿ ಸೇವಿಸಿ.