Advertisement

ಕೋವಿಡ್ 19: ಜಾರಿಯಲ್ಲಿರುವ ಜಾಗರೂಕ ಕ್ರಮಗಳ ಮುಂದುವರಿಕೆಗೆ ನಿರ್ಧಾರ

10:09 AM Mar 21, 2020 | sudhir |

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ತಗುಲಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಈಗ ಜಾರಿಗೊಳಿಸಲಾಗುತ್ತಿರುವ ಜಾಗರೂ ಕತೆಯ ಕ್ರಮಗಳನ್ನು ಮುಂದುವರಿಸಲು ಮತ್ತು ಆರೋಗ್ಯ- ಪೊಲೀಸ್‌ ಇಲಾಖೆಯ ಸಹಾಯದೊಂದಿಗೆ ನಿಗಾ- ಪ್ರತಿರೋಧ ಚಟುವಟಿಕೆಗಳನ್ನು ಬಲಪಡಿಸಲು ನಿರ್ಧರಿಸಲಾಗಿದೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆ ಈ ನಿರ್ಧಾರ ಕೈಗೊಂಡಿದೆ. ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು.

ಜನಜಾಗೃತಿ ಸಮಿತಿಗಳು ಮತ್ತಷ್ಟು ಚುರುಕು
ರೋಗ ಹರಡುವಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ತಡೆಯಲು ಅಗತ್ಯವಿರುವ ಎಲ್ಲ ಸಜ್ಜೀಕರಣ ನಡೆಸಲಾಗುವುದು. ಎಲ್ಲ ವಲಯಗಳಲ್ಲಿರುವವರು ಈಗಾಗಲೇ ತಿಳಿಸಲಾದ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದೇಶ ಗಳಿಂದ ಊರಿಗೆ ಮರಳಿದವರು ಜಿಲ್ಲಾ ಕೊರೊನಾ ನಿಯಂತ್ರಣ ಘಟಕವನ್ನು ಆಯಾ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಟುಂಬ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆಯಲ್ಲಿರುವ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು. ಜನತೆಯಲ್ಲಿ ಮೂಡಿರುವ ಆತಂಕ ನಿವಾರಣೆ ಉದ್ದೇಶದಿಂದ ರಚಿಸಲಾದ ಜನಜಾಗೃತಿ ಸಮಿತಿಗಳನ್ನು ಮತ್ತಷ್ಟು ಚುರುಕುಗೊಳಿ ಸಲಾಗುವುದು ಎಂದು ಸಭೆ ತಿಳಿಸಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಎಸ್‌. ಸಾಬು, ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌, ಉಪ ಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ಡಿ.ವೈ.ಎಸ್‌. ಪಿ. ಪಿ.ಬಾಲಕೃಷ್ಣನ್‌, ಜಿಲ್ಲಾ ವೈದ್ಯಾಧಿಕಾರಿ ಡಾ| ಎಂ.ವಿ. ರಾಮದಾಸ್‌, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ| ಮನೋಜ್‌ ಎ.ಟಿ. ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ನೀಡಿ
ದೂ.ಸಂಖ್ಯೆ: 9946000493
ಕೊರೊನಾ ಹಾವಳಿ ತಲೆದೋರಿರುವ ಪ್ರದೇಶಗಳಿಂದ ಮತ್ತು ವಿದೇಶಗಳಿಂದ ಊರಿಗೆ ಮರಳಿದ ಮಂದಿ ಜಿಲ್ಲಾ ಕೊರೊನಾ ಘಟಕ ದೂರವಾಣಿ ಸಂಖ್ಯೆ: 9946000493ಕ್ಕೆ ಮಾಹಿತಿ ನೀಡಬೇಕು. ರೋಗ ಹರಡುವಿಕೆ ತಡೆಯುವ ಅಂಗವಾಗಿ ರೋಗ ಲಕ್ಷಣ ಕಂಡು ಬಂದಲ್ಲಿ ಘಟಕಕ್ಕೆ ಮಾಹಿತಿ ನೀಡಿದ ನಂತರವಷ್ಟೇ ಆಸ್ಪತ್ರೆಗೆ ತೆರಳಬೇಕು. ಯಾವ ಕಾರಣಕ್ಕೂ ನಿಗಾ ಅವಧಿಯಲ್ಲಿ ಕೌಟುಂಬಿಕ ಸಮಾರಂಭಗಳಲ್ಲಿ, ಇನ್ನಿತರ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಕೂಡದು.

Advertisement
Advertisement

Udayavani is now on Telegram. Click here to join our channel and stay updated with the latest news.

Next