Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ವರ್ಷದ ಮಗುವಿಗೂ ಕೋವಿಡ್-19 ಸೋಂಕು!

05:15 PM Apr 15, 2020 | Team Udayavani |

ಕಲಬುರಗಿ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ವರ್ಷದ ಮಗುವಿಗೂ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

Advertisement

ಕಲಬುರಗಿ ತಾಲೂಕಿನ ಕವಲಗಾ (ಕೆ) ಗ್ರಾಮದ ಮಗು ಕೆಲ ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿತ್ತು. ಹೀಗಾಗಿ ಪೋಷಕರು ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ತೋರಿಸಿದ್ದರು.

ಆದರೆ, ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರಿ ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ಅಲ್ಲಿಂದ ಮಗುವಿನ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಪಡೆದ ವೈದ್ಯರು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿಯಲ್ಲಿ ಮಗುವಿಗೆ ಕೋವಿಡ್-19 ಪಾಸಿಟಿವ್ ಇರೋದು ಖಚಿತವಾಗಿದೆ.

ಮಗುವಿನ ಪೋಷಕರು ಮತ್ತು ಕುಟುಂಬದವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಗೊತ್ತಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೋಷಕರು ಹಾಗೂ ಮಗುವಿನ ಈ ಮೊದಲು ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ತಪಾಸಣೆಗೆ ಒಳಪಡಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಇನ್ನು, ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ 17 ಜನರಲ್ಲಿ ಮೂವರು ಮಕ್ಕಳಿಗೆ ಮಹಾಮಾರಿ ರೋಗ ಕಾಣಿಸಿಕೊಂಡಿರುವುದು ನಾಗರಿಕರಿಗೆ ಆಘಾತ ಉಂಟು ಮಾಡಿದೆ. ಈ‌ ಹಿಂದೆ ವಾಡಿ ಪಟ್ಟಣದ ಎರಡು ವರ್ಷದ‌ ಮಗು ಹಾಗೂ ಮಂಗಳವಾರ ಹತ್ತು ವರ್ಷದ ಬಾಲಕಿಗೆ ಕೋವಿಡ್-19 ಸೋಂಕು ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next