Advertisement

ಸಾಲಿಗ್ರಾಮ: ಚಿತ್ರಪಾಡಿಯ ಇಬ್ಬರು ಹೋಟೆಲ್ ಕಾರ್ಮಿಕರಿಗೆ ಪಾಸಿಟಿವ್

06:29 PM Jul 10, 2020 | Hari Prasad |

ಸಾಲಿಗ್ರಾಮ: ಇಲ್ಲಿನ ಚಿತ್ರಪಾಡಿಯ ಹೋಟೆಲ್ ಒಂದದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ.

Advertisement

ಈ ಇಬ್ಬರು ಹೊಟೇಲ್ ಕಾರ್ಮಿಕರಲ್ಲಿ ಸೋಂಕು ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿದೆ.

ಇದೀಗ ಈ ಕಾರ್ಮಿಕರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಇವರು ಕೆಲಸ ಮಾಡುತ್ತಿದ್ದ ಹೋಟೆಲ್ ಹಾಗೂ ಅವರು ವಾಸವಿದ್ದ ಮನೆಯನ್ನು ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.

ಕಂದಾಯ ಅಧಿಕಾರಿ ರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next