Advertisement

ಉಡುಪಿ: ಪೊಲೀಸರಲ್ಲೂ ಸೋಂಕು ಪತ್ತೆ ; ಇಲಾಖೆಯಿಂದ ಹಲವು ಮುನ್ನೆಚ್ಚರಿಕೆ

02:01 AM May 27, 2020 | Hari Prasad |

ಉಡುಪಿ: ಜಿಲ್ಲೆಯಲ್ಲಿ ಪೊಲೀಸ್‌ ಸಿಬಂದಿಗೂ ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗೆ ಆತಂಕ ಎದುರಾಗಿದೆ.

Advertisement

ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈಗಾಗಲೇ 540 ಸಿಬಂದಿಯ ಗಂಟಲಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 60 ವರದಿಗಳು ಬಂದಿದ್ದು, ನಾಲ್ಕು ಪಾಸಿಟಿವ್‌ ಬಂದಿದೆ. ಮುಂದಿನ 3 – 4 ದಿನಗಳೊಳಗೆ ಎಲ್ಲ ಸಿಬಂದಿಯ ವರದಿ ಲಭಿಸುವ ನಿರೀಕ್ಷೆಯಿದೆ.

ಆದ್ಯತೆಯ ಮೇರೆಗೆ ಎಲ್ಲ ಪೊಲೀಸ್‌ ಸಿಬಂದಿಯ ಗಂಟಲಿನ ಮಾದರಿಯನ್ನು ಪರೀಕ್ಷೆಗೊಳಪಡಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.

ಹಿರಿಯ ಪೊಲೀಸರ ಮೇಲೆ ಕಾಳಜಿ
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 50 ವರ್ಷ ಮೇಲ್ಪಟ್ಟ ಪೊಲೀಸ್‌ ಸಿಬಂದಿಯ ಆರೋಗ್ಯ ರಕ್ಷಣೆಗೆ ಅಧಿಕ ಆದ್ಯತೆ ನೀಡಲಾಗಿದೆ. ಮನೆಯಿಂದಲೇ ಆಹಾರ ತರುವಂತೆ ಸೂಚಿಸಲಾಗಿದೆ. ಜತೆಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಎಲ್ಲ ಠಾಣೆಗಳಿಗೂ ನೀಡಲಾಗಿದೆ.

ಮೇ 31ರ ಅನಂತರ ವಿಶೇಷ ವ್ಯವಸ್ಥೆ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಜಿಲ್ಲೆಯಲ್ಲಿ ಮೇ 31ರ ವರೆಗೆ ನಿರ್ಬಂಧ ವಿಧಿಸಲಾಗಿದೆ. ಅನಂತರ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಲು ವಿಶೇಷ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಯಾಣಿಕರನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸದೆ ದೂರದಿಂದಲೇ ಸ್ಕ್ರೀನಿಂಗ್‌ ಮಾಡುವ ಬಾಕ್ಸ್‌ ರೀತಿಯ ವ್ಯವಸ್ಥೆ ಮಾಡುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದೆ.

Advertisement

ಪೊಲೀಸ್‌ ಸಿಬಂದಿಗೆ ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಹಲವಾರು ಮಾರ್ಗಸೂಚಿಗಳನ್ನು ನೀಡಲಾಗಿದೆ. ಸೋಂಕು ಲಕ್ಷಣ ಕಂಡು ಬಂದಿರುವ ಸಿಬಂದಿ ಕಾರ್ಯನಿರ್ವಹಿಸಿದ್ದ ಎಸ್‌ಪಿ ಕಚೇರಿ ಮತ್ತು ಎಲ್ಲ ಠಾಣೆಗಳನ್ನೂ ಸ್ಯಾನಿಟೈಸ್‌ಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆ ಜಾರಿಯಲ್ಲಿದೆ.
– ಎನ್‌. ವಿಷ್ಣುವರ್ಧನ್‌, ಉಡುಪಿ ಜಿಲ್ಲಾ ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next