Advertisement

ಒಮಿಕ್ರಾನ್‌ ಪ್ರಕರಣ ಹಿನ್ನೆಲೆ: ಮಧ್ಯಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿ

11:49 PM Dec 23, 2021 | Team Udayavani |

ಮಧ್ಯಪ್ರದೇಶ: ಭೋಪಾಲ್‌ ಹಲವು ರಾಜ್ಯಗಳಲ್ಲಿ ಒಮಿಕ್ರಾನ್‌ ರೂಪಾಂತರಿ ಪ್ರಕರಣಗಳು ಪತ್ತೆಯಾಗುತ್ತಿರುವಂತೆಯೇ, ಮಧ್ಯಪ್ರದೇಶ ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.

Advertisement

ಶುಕ್ರವಾರದಿಂದಲೇ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಗುರುವಾರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಘೋಷಿಸಿದ್ದಾರೆ.

ವಿಶೇಷವೆಂದರೆ, ಮಧ್ಯ ಪ್ರದೇಶದಲ್ಲಿ ಈವರೆಗೆ ಒಮಿಕ್ರಾನ್‌ ಪತ್ತೆಯಾಗಿಲ್ಲ.

ಇದನ್ನೂ ಓದಿ:ಸಿದ್ದರಾಮಯ್ಯಗೆ ವಯಸ್ಸಾಗಿಲ್ಲ ಎಂದ ಈಶ್ವರಪ್ಪ

ಪ್ರಧಾನಿ ಮೋದಿ ಸಭೆ
ದೇಶಾದ್ಯಂತ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೊಸದಿಲ್ಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನ ಸಭೆ ನಡೆಸಿದ್ದಾರೆ. ಸೋಂಕಿತರ ಸಂಪರ್ಕಿತ ರನ್ನು ಪತ್ತೆ ಹಚ್ಚುವ, ಪರೀಕ್ಷೆಗಳನ್ನು ಹೆಚ್ಚಿಸುವ, ಲಸಿಕೆಗೆ ವೇಗ ನೀಡುವ ಹಾಗೂ ದೇಶಾದ್ಯಂತ ಆರೋಗ್ಯ ಮೂಲಸೌಕರ್ಯಗಳನ್ನು ಬಲಿಷ್ಠಗೊಳಿಸು ವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಮೋದಿ ಸೂಚಿಸಿದ್ದಾರೆ.

Advertisement

ದೇಶದಲ್ಲಿ 300 ದಾಟಿದ ಪ್ರಕರಣ
ದೇಶಾದ್ಯಂತ ಗುರುವಾರ ಒಮಿಕ್ರಾನ್‌ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ. 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ವ್ಯಾಪಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ ಒಮಿಕ್ರಾನ್‌ ದೃಢಪಟ್ಟವರ ಸಂಖ್ಯೆ 80 ದಾಟಿದರೆ, ದಿಲ್ಲಿಯಲ್ಲಿ 64 ಆಗಿದೆ. ತೆಲಂಗಾಣ – 24, ರಾಜಸ್ಥಾನ – 21 ಮತ್ತು ಕರ್ನಾಟಕದಲ್ಲಿ 31 ಪ್ರಕರಣಗಳು ದೃಢಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next