Advertisement

ಕೋವಿಡ್‌-19 ಸೋಂಕು: ಶೇ.66ರಷ್ಟು ಸೈಬರ್‌ ಕ್ರೈಂ ಪ್ರಕರಣ ಹೆಚ್ಚಳ

09:48 AM Mar 28, 2020 | Sriram |

ಕೋವಿಡ್‌-19 ಹೆಸರಲ್ಲಿ ಕಳೆದ ಫೆಬ್ರವರಿ ಅಂತ್ಯಕ್ಕೆ ಇಮೇಲ್‌ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.66.7ರಷ್ಟು ಏರಿಕೆಯಾಗಿದೆ ಎಂಬುದು ಅಂತಾರಾಷ್ಟ್ರೀಯ ಅಧ್ಯಯನದ ಸಾರಾಂಶ. ನಿಮಗೂ ಇಂಥದೊಂದು ಇಮೇಲ್‌ ಬಂದಿರಬಹುದು, ಕಡೆಗಣಿಸಿ. ಅದರ ಬಲೆಗೆ ಬೀಳಬೇಡಿ.

Advertisement

ನ್ಯೂಯಾರ್ಕ್‌: ಕೋವಿಡ್‌-19 ಸೋಂಕು ಹರಡುವಿಕೆ ಸಂಬಂಧಪಟ್ಟಂತೆ ಹಲವಾರು ಸುಳ್ಳು ವದಂತಿಗಳು ಹರಡುತ್ತಿರುವುದು ಹೊಸದಲ್ಲ. ಆದರೆ ಈ ವೈರಸ್‌ ಭೀತಿಯನ್ನೆ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವ ಪ್ರಕರಣಗಳು ಸ್ವಲ್ಪ ಹೊಸದು. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದ್ದು, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂಬ ಸಂದೇಶವನ್ನು ರವಾನಿಸಿದೆ.

ವಂಚನೆಗಾರರು ಪ್ರಧಾನವಾಗಿ ಬಳಸುತ್ತಿರುವುದು ಇಮೇಲ್‌ ಅನ್ನೇ. ಆ ಮೂಲಕವೇ ಮಿಕವನ್ನು ಹುಡುಕಿ ಬಲೆ ಹಾಕಿ ಹಿಡಿಯುತ್ತಿದ್ದಾರೆ. ಅದಕ್ಕೇ ಶೇ. 66 ರಷ್ಟು ಸೈಬರ್‌ ಅಪರಾಧಗಳು ಹೆಚ್ಚಾಗಿವೆ.

ಇಮೇಲ್‌ ಫಿಶಿಂಗ್‌ ದಾಳಿಗಳು
ಮೊದಲಿನಂತೆ ನಡೆಯುತ್ತಿದ್ದ ಫಿಶಿಂಗ್‌ ತಂತ್ರಗಳನ್ನೇ ಈಗಲೂ ಬಳಸಲಾಗುತ್ತಿದ್ದು, ವಂಚನೆಕಾರರು ಕೋವಿಡ್‌-19 ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನಸಾಮಾನ್ಯರನ್ನು ಮತ್ತು ಸೋಂಕಿತರನ್ನು, ಶಂಕಿತರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ಫೆಬ್ರವರಿ ಅಂತ್ಯದ ಲೆಕ್ಕ ಬಿಟ್ಟು, ಕೇವಲ ಮಾ. 1ರಿಂದ 23ರ ಅವಧಿಯಲ್ಲಿ ಗಮನಿಸಿದರೆ, 4,67,825 ಇಮೇಲ್‌ ಫಿಶಿಂಗ್‌ ಪ್ರಕರಣ ನಡೆದಿದೆ. ಇದರಲ್ಲಿ 9,116 ದಾಳಿಗಳು ಕೋವಿಡ್‌-19 ನ್ನೇ ನೆಪವಾಗಿರಿಸಿಕೊಂಡದ್ದು ಎಂದು ಹೇಳುತ್ತದೆ ಅಧ್ಯಯನ ಸಂಸ್ಥೆಯ ವರದಿ. ಇದೇ ಜನವರಿಯಲ್ಲಿ 137 ಹಾಗೂ ಫೆಬ್ರವರಿಯಲ್ಲಿ 1,188 ಕೋವಿಡ್‌-19 ಸಂಬಂಧಿತ ಫಿಶಿಂಗ್‌ ಪ್ರಕರಣಗಳು ನಡೆದಿದ್ದವು.

ಎಚ್ಚರ ವಹಿಸಿ
ಪ್ರಸ್ತುತ ಬೇರೆಲ್ಲ ರೀತಿಯ ಫಿಶಿಂಗ್‌ಗೆ ಹೋಲಿಸಿದಲ್ಲಿ ಕೋವಿಡ್‌-19 ಸಂಬಂಧಿತ ಫಿಶಿಂಗ್‌ ಪ್ರಕರಣಗಳು ಕಡಿಮೆ ಇದ್ದಂತೆ ತೋರಬಹುದು. ಆದರೆ, ದಿಢೀರನೇ ಅವುಗಳ ಸಂಖ್ಯೆ ಏರಬಹುದು. ಹಾಗಾಗಿ ಪ್ರತಿಯೊಬ್ಬರೂ ಎಚ್ಚರ ವಹಿಸಿ. ಕೋವಿಡ್‌-19 ಸೋಂಕಿನ ಹೆಸರಲ್ಲಿ ವಂಚನೆ, ಕಂಪೆನೆಗಳ ಹೆಸರಲ್ಲಿ ಇಮೇಲ್‌ ಎಲ್ಲವೂ ಬರಬಹುದು. ಕಚೇರಿಗಳ ಇಮೇಲ್‌ನೂ° ಹ್ಯಾಕ್‌ ಮಾಡಬಹುದು ಎಚ್ಚರವಹಿಸುವುದು ಸೂಕ್ತ ಎಂದಿದೆ ಅಧ್ಯಯನ ಸಂಸ್ಥೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next