Advertisement

ಕಾಸರಗೋಡು: ಮತ್ತೆ 17 ಕೋವಿಡ್ 19 ಪ್ರಕರಣ ದೃಢ

10:28 AM Apr 01, 2020 | sudhir |

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮತ್ತೆ 17 ಕೋವಿಡ್ 19 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕೇರಳ ರಾಜ್ಯದಲ್ಲಿ ಒಟ್ಟು 32 ಮಂದಿಗೆ ಕೋವಿಡ್ 19 ವೈರಸ್‌ ಸೋಂಕು ದೃಢೀಕರಿಸಲಾಗಿದೆ.

Advertisement

ರಾಜ್ಯದಲ್ಲಿ ಒಟ್ಟು ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ 234ಕ್ಕೇರಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 106ಕ್ಕೇರಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೋಮವಾರ ಕಣ್ಣೂರು ಜಿಲ್ಲೆಯಲ್ಲಿ 11, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ ಎರಡರಂತೆಯೂ ಕಾಸರಗೋಡಿನಲ್ಲಿ 17 ಮಂದಿಗೆ ಕೋವಿಡ್ 19 ವೈರಸ್‌ ಸೋಂಕು ದೃಢಪಡಿಸಲಾಗಿದೆ. ಮಾ. 30ರಂದು ರಾಜ್ಯದಲ್ಲಿ 126 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶ ದಿಂದ ಬಂದ 17 ಮಂದಿಗೆ ಮತ್ತು ಕೋವಿಡ್ 19 ವೈರಸ್‌ ಸೋಂಕಿತರೊಂದಿಗಿನ ಸಂಪರ್ಕದಿಂದ 15 ಮಂದಿಗೆ ಕೋವಿಡ್ 19 ಸೋಂಕು ಬಾಧಿಸಿದೆ. ಕೋವಿಡ್ 19 ವೈರಸ್‌ ಸಂಬಂಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ಅಪಪ್ರಚಾರ ನಡೆಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರತಿದಿನ ಸಭೆ
ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕು ಹರಡುತ್ತಿರುವು ದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸುವ ಸಭೆಯು ವಿಶೇಷ ಅಧಿಕಾರಿಯಾ ಗಿರುವ ರಾಜ್ಯ ಉದ್ದಿಮೆ ಇಲಾಖೆ ಕಾರ್ಯದರ್ಶಿ
ಅಲ್‌ಕೇಷ್‌ ಕುಮಾರ್‌ ಶರ್ಮ ಅವರ ಅಧ್ಯಕ್ಷತೆಯಲ್ಲಿ ಪ್ರತಿದಿನ ಸಂಜೆ 4 ಗಂಟೆಗೆ ಜರಗುತ್ತಿದೆ.

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು, ಜಿಲ್ಲಾ ಮಟ್ಟದ ಸಿಬಂದಿ, ಕೋರ್‌ ಸಮಿತಿ ಸದಸ್ಯರು ಆ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

Advertisement

ಪಿಎಸ್‌ಸಿ ರ್‍ಯಾಂಕ್‌ 3 ತಿಂಗಳು ವಿಸ್ತರಣೆ
ಕೋವಿಡ್ 19 ವೈರಸ್‌ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲಾವಧಿ ಮುಗಿದ ಪಿಎಸ್‌ಸಿ. ರ್‍ಯಾಂಕ್‌ ಯಾದಿಯ ಪ್ರಕಟನೆಯನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ರಾಜ್ಯದಲ್ಲಿ ಕಳೆಯುತ್ತಿರುವ ಅನ್ಯರಾಜ್ಯದ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಕೇರಳದ ಆಹಾರ ಒಗ್ಗುವುದಿಲ್ಲ. ಆದುದರಿಂದ ಅವರಿಗೆ ಅವರದ್ದೇ ಶೈಲಿಯ ಆಹಾರವನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿಗಳು ಅನ್ಯ ರಾಜ್ಯಗಳ ಕಾರ್ಮಿಕರ ಕ್ಷೇಮ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next