Advertisement

ಕೋವಿಡ್-19: ಭಾರತದಲ್ಲಿ ಒಂದೇ ದಿನ 100 ಮಂದಿಗೆ ಸೋಂಕು ದೃಢ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

11:11 AM Mar 27, 2020 | Mithun PG |

ನವದೆಹಲಿ: ಮಹಾಮಾರಿ ಕೋವಿಡ್-19 ವೈರಸ್ ತಡೆಗಟ್ಟಲು ಭಾರತದಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದ್ದು ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಸರ್ಕಾರ ಹೊರಡಿಸಿದೆ. ದುರಂತವೆಂದರೇ ಸೋಮವಾರ ಒಂದೇ ದಿನ 100 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ಮೂಲಕ ಭಾರತದಲ್ಲಿ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 499ಕ್ಕೆ ಏರಿಕೆಯಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಮಾತ್ರವಲ್ಲದೆ ಮಾರಾಣಾಂತಿಕ ವೈರಸ್ ಗೆ ಈಗಾಗಲೇ 10 ಜನರು ಮೃತಪಟ್ಟಿದ್ದಾರೆ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ಮುಂತಾದ ರಾಜ್ಯಗಳು ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಹೊರಡಿಸಿದೆ. ಅದರ ಜೊತೆಗೆ ಕೆಲವು ಕೇಂದ್ರಾಡಳಿತ ಪ್ರದೇಶಗಳು ಮತ್ತು 30 ರಾಜ್ಯಗಳಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

12 ಖಾಸಗಿ ಕೋವಿಡ್-19 ಸೋಂಕು ಪತ್ತೆ ಪ್ರಯೋಗಾಲಯಕ್ಕೆ ಕೂಡ ಕೇಂದ್ರ ಸರ್ಕಾರ ಮಾನ್ಯತೆ ನೀಡಿದೆ.

ಮರಣ ಪ್ರಮಾಣ 10ಕ್ಕೆ ಏರಿಕೆ: ಸೋಮವಾರ ಒಂದೇ ದಿನ ಭಾರತದಲ್ಲಿ  ಮೂವರು ಮೃತರಾಗಿದ್ದರು. ಆ ಮೂಲಕ ಸಾವನ್ನಪ್ಪಿದವರ ಪ್ರಮಾಣ 10ಕ್ಕೆ ಏರಿಕೆಯಾಗಿದೆ. ಇಟಲಿಯಿಂದ ಇತ್ತೀಚಿಗಷ್ಟೇ ಹಿಂದಿರುಗಿದ್ದ 55 ವರ್ಷದ ವ್ಯಕ್ತಿ ಕೊಲ್ಕತ್ತಾದಲ್ಲಿ ಈ ಸೋಂಕುವಿನಿಂದ ಮೃತರಾಗಿದ್ದರು.

ಹಿಮಾಚಲ ಪ್ರದೇಶದಲ್ಲೂ ಈ ಸೊಂಕಿನಿಂದ ಮೊದಲ ಸಾವು ಸಂಭವಿಸಿದ್ದು, ಈ 69 ವರ್ಷದ ವ್ಯಕ್ತಿ ಅಮೆರಿಕಾದಿಂದ ಹಿಂದಿರುಗಿದ್ದರು. ಮುಂಬೈಯ ಓರ್ವ ವ್ಯಕ್ತಿಯು ಮೃತಪಟ್ಟಿದ್ದು ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ವ್ಯಕ್ತಿಗೆ ಮೊದಲು ನೆಗೆಟಿವ್ ಪರೀಕ್ಷಾ ವರದಿ ಬಂದಿದ್ದು ಕೆಲವು ದಿನಗಳ ನಂತರದಲ್ಲಿ ಪಾಸಿಟಿವ್ ಆಗಿ ಬದಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next