Advertisement

Covid 19 ಲ್ಯಾಬ್ ಟೆಸ್ಟ್ ಸೂಕ್ಷ್ಮವಾದದ್ದು, ಹೋಮ್ ಟೆಸ್ಟ್ ಕಿಟ್ ಬಗ್ಗೆ ತಜ್ಞರು ಹೇಳಿದ್ದೇನು

08:25 AM May 17, 2020 | Nagendra Trasi |

ಸಿಂಗಾಪೂರ್:ಕೋವಿಡ್ 19 ವೈರಸ್ ಅನ್ನು ಹೋಮ್ ಟೆಸ್ಟ್ ಕಿಟ್ಸ್ ಕೆಲವು ಮಿತಿಯೊಳಗೆ ಸೋಂಕನ್ನು ಪತ್ತೆಹಚ್ಚಬಹುದು. ಆದರೆ ಇದೊಂದು ಮಾರಕ ವೈರಸ್ ಹೋಮ್ ಟೆಸ್ಟ್ ನಿಖರ ಫಲಿತಾಂಶ ನೀಡಲಾರದು ಎಂದು ಡ್ಯೂಕ್-ಎನ್ ಯುಎಸ್ ಮೆಡಿಕಲ್ ಸ್ಕೂಲ್ ನ ನಿರ್ದೇಶಕ, ಪ್ರೊ.ವಾಂಗ್ ಲಿನ್ಫಾ ಎಚ್ಚರಿಸಿದ್ದಾರೆ.

Advertisement

“ಜನಸಾಮಾನ್ಯರು ಹೇಗೆ ಆಲೋಚಿಸುತ್ತಾರೆ ಎಂಬುದು ತಿಳಿದಿದೆ. ಕೋವಿಡ್ ಪತ್ತೆ ಹಚ್ಚಲು ಹೋಮ್ ಕಿಟ್ ಇದ್ದರೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ ಹೋಮ್ ಕಿಟ್ ನಿಂದ ನಿಖರ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಪ್ರಯೋಗಾಲಯದ ಪರೀಕ್ಷೆ ತುಂಬಾ ಸೂಕ್ಷ್ಮವಾಗಿರುತ್ತದೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಯುನೈಟೆಡ್ ಕಿಂಗ್ ಡಮ್ ಕೂಡಾ ಇಂತಹ ಹೋಮ್ ಕಿಟ್ ಬಳಸಿ ಕಂಗಾಲಾಗಿತ್ತು. ಯುಕೆಯಲ್ಲಿ 3.5 ಮಿಲಿಯನ್ ಹೋಮ್ ಕಿಟ್ ಬಳಸಿದ್ದು ಅದರಲ್ಲಿ ಅಸಮರ್ಪಕ ಫಲಿತಾಂಶ ಬಂದಿರುವುದಾಗಿ ಅಧಿಕಾರಿಗಳು ಘೋಷಿಸಿದ್ದರು.

ಈ ಹಿನ್ನಲೆಯಲ್ಲಿ ಆನ್ ಲೈನ್ ನಲ್ಲಿರುವ ನೂರಾರು ಅಕ್ರಮ ಟೆಸ್ಟ್ ಕಿಟ್ಸ್ ಗಳ ಪಟ್ಟಿಯನ್ನು ಹೆಲ್ತ್ ಸೈನ್ಸ್ ಅಥಾರಿಟಿ(ಎಚ್ ಎಸ್ ಎ) ತೆಗೆದು ಹಾಕಿದೆ. ಆನ್ ಲೈನ್ ನಲ್ಲಿ ದೊರೆಯುವ ಈ ಕಿಟ್ ಗಳಲ್ಲಿ ಅಸಮರ್ಪಕ ಹಾಗೂ ದಾರಿ ತಪ್ಪಿಸುವ ಫಲಿತಾಂಶ ಬರುತ್ತಿರುವುದಾಗಿ ಎಚ್ ಎಸ್ ಎ ದೂರಿದೆ.

ಈ ರೀತಿ ಅನುಮತಿ ರಹಿತ ಪರೀಕ್ಷಾ ಕಿಟ್ ಗಳನ್ನು ಗ್ರಾಹಕರು ಸ್ವಯಂ ಆಗಿ ಬಳಕೆ ಮಾಡುವುದರಿಂದ ಸುಳ್ಳು ಮಾಹಿತಿ ಪಡೆದಂತಾಗುತ್ತದೆ. ಅಷ್ಟೇ ಅಲ್ಲ ಗೊತ್ತಿಲ್ಲದೆಯೇ ಕೋವಿಡ್ 19 ಸೋಂಕನ್ನು ಹರಡುವ ಅಪಾಯ ಹೆಚ್ಚು ಎಂದು ಎಚ್ ಎಸ್ ಎ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next