Advertisement

ಒಂದೇ ದಿನ 13 ಮಂದಿಗೆ ಕೋವಿಡ್‌ 19

05:47 AM May 30, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ವೈರಸ್‌ ಹಾವಳಿ ಹೆಚ್ಚಾಗಿದ್ದು, ಕಂಟೈನ್ಮೆಂಟ್‌ ವಾರ್ಡ್‌ ಪಾದರಾಯನಪುರದ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ಅವರಿಗೆ ಕೋವಿಡ್‌ 19 ವೈರಸ್‌ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಶುಕ್ರವಾರ 13 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 300ರ ಗಡಿದಾಟಿದೆ.

Advertisement

ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ವಾರ್ಡ್‌ನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದ ಹಿನ್ನೆಲೆ ವಾರ್ಡ್‌  ಅನ್ನೇ ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲಾಗಿತ್ತು. ಬಳಿಕ ರ್‍ಯಾಂಡಮ್‌ ಪರೀಕ್ಷೆ ವೇಳೆಯೂ ಅನೇಕರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಸದ್ಯ ಸಾಮುದಾಯಿಕ ಸೋಂಕು ಪರೀಕ್ಷೆ ಈ ವಾರ್ಡ್‌ನಲ್ಲಿ ನಡೆಯುತ್ತಿದೆ.

ಈ ನಡುವೆ ವಾರ್ಡ್‌ನಲ್ಲಿ ಹೆಚ್ಚು ಓಡಾಟ ಹಿನ್ನೆಲೆ ಅಲ್ಲಿನ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ಅವರು ಖಾಸಗಿ ಪ್ರಯೋಗಾಲಯದಲ್ಲಿ ಚಾಮರಾಜಪೇಟೆ ಶಾಸಕರೊಂದಿಗೆ ಸೋಂಕು ಪರೀಕ್ಷೆ ಮಾಡಿಸಿದ್ದಾರೆ. ಶುಕ್ರವಾರ ಸಂಜೆ ಸೋಂಕು ಪರೀಕ್ಷಾ ವರದಿ ಬಂದಿದ್ದು, ಶಾಸಕರ ಸೋಂಕು ಪರೀಕ್ಷಾ ವರದಿ ನೆಗೆಟಿವ್‌, ಪಾಲಿಕೆ ಸದಸ್ಯರದ್ದು ಪಾಸಿಟಿವ್‌ ಬಂದಿದೆ. ಇನ್ನು ಸೋಂಕು ದೃಢಪಟ್ಟ ಹಿನ್ನೆಲೆ ಪಾಲಿಕೆ ಸದಸ್ಯರ ಕುಟುಂಬಸ್ಥರು ಕ್ವಾರಂಟೈನ್‌ ಆಗಿದ್ದಾರೆ.

ಶನಿವಾರ ಬೆಳಗ್ಗೆ ಪ್ರಾಥಮಿಕ  ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಪತ್ತೆ ಮಾಡಿ ಕ್ವಾರಂಟೈನ್‌ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next