Advertisement
“ಈ ರೀತಿಯ ಪರಿಸ್ಥಿತಿಯನ್ನು ನಾವು ಈ ಹಿಂದೆಂದೂ ಕಂಡಿರಲಿಲ್ಲ. ಕಳೆದ ಕೆಲವೇ ಗಂಟೆಗಳಲ್ಲಿ ದೇಶದ ನಿಯಮಗಳು ಬದಲಾಗಿವೆ. ಮುಂದಿನ ಎರಡು ವಾರಗಳಲ್ಲಿ ಮತ್ತಷ್ಟು ಕಠಿನ ನಿಯಮಗಳು ರೂಪುಗೊಳ್ಳಲೂಬಹುದು. ಹೀಗಾಗಿ ನಾವು ಎಲ್ಲಿಗೂ ಪ್ರಯಾಣ ಬೆಳೆಸದೆ, ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯ. ದೇಶಿ, ವಿದೇಶಿ ಲೀಗ್‌ಗಳಲ್ಲಿ ಆಡದೇ ಹೋದರೆ ಕ್ರಿಕೆಟಿಗರಿಗೆ ನಷ್ಟವಾಗುವುದು ಸಹಜ. ಆದರೆ ಇದು ಅನಿವಾರ್ಯ’ ಎಂದು ಫಿಂಚ್ ಹೇಳಿದ್ದಾರೆ.
“ಈಗಾಗಲೇ ವಿಶ್ವದ ಆರ್ಥಿಕತೆ ಕೋವಿಡ್ 19 ಭೀತಿಗೆ ನಲುಗಿ ಹೋಗಿದೆ. ಇದನ್ನು ಸರಿಪಡಿಸಬೇಕಾದರೆ ವರ್ಷಗಳೇ ಬೇಕು. ಆದ್ದರಿಂದ ಕೋವಿಡ್ 19 ಬಗ್ಗೆ ಎಚ್ಚೆತ್ತು ಮುಜಾಂಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನದಲ್ಲಿ ತಿನ್ನುವ ಆಹಾರಕ್ಕೂ ಹಾಹಾಕಾರ ಎದುರಾದೀತು’ ಎಂದೂ ಫಿಂಚ್ ಎಚ್ಚರಿಸಿದ್ದಾರೆ. ಆಸ್ಟ್ರೇಲಿಯದಲ್ಲಿ ಈಗಾಗಲೇ ಪ್ರಯಾಣ ನಿರ್ಬಂಧ ವಿಧಿಸಲಾಗಿದೆ. ಐಪಿಎಲ್ ಸಹಿತ ಇನ್ನಿತರ ಕ್ರೀಡಾ ಕೂಟಗಳಿಗೆ ಆಟಗಾರರು ತಮ್ಮದೇ ರಿಸ್ಕ್ನಲ್ಲಿ ಪ್ರಯಾಣಿಸಬೇಕು, ಅಲ್ಲಿ ಏನೇ ಸಂಭವಿಸಿದರೂ ಆಸ್ಟ್ರೇಲಿಯ ಸರಕಾರ ನೆರವಿಗೆ ಬರುವುದಿಲ್ಲ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಸ್ಪಷ್ಟವಾಗಿ ಸೂಚಿಸಿದ್ದಾರೆ.