Advertisement

ಯುಗಾದಿಗೂ ಕೋವಿಡ್ 19 ಕಾರ್ಮೋಡ

04:07 PM Mar 25, 2020 | Suhan S |

ಚಿಕ್ಕೋಡಿ: ವಿಶ್ವ ವ್ಯಾಪಿ ಹಬ್ಬಿರುವ ಮಹಾಮಾರಿ ಕೋವಿಡ್ 19 ವೈರಸ್‌ ಅಬ್ಬರದಿಂದ ಯುಗಾದಿ ಅಮಾವಾಸ್ಯೆ ಮಂಕಾಗಿದೆ. ಹೀಗಾಗಿ ಅಮಾವಾಸ್ಯೆಯಂದು ಜನಜಂಗುಳಿಯಿಂದ ಕೂಡಿರುತ್ತಿದ್ದ ಗಡಿ ಭಾಗದ ದೇವಸ್ಥಾನಗಳು ಭಕ್ತರಿಲ್ಲದೇ ಭಣಗುಡುತ್ತಿವೆ.

Advertisement

ಯುಗಾದಿ ಅಮಾವಾಸ್ಯೆ ಮತ್ತು ಯುಗಾದಿ ಹಬ್ಬವನ್ನು ಭಾರತೀಯರು ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ. ಆದರೆ ಪ್ರಸಕ್ತ ವರ್ಷದಲ್ಲಿ ಕೋವಿಡ್ 19  ವೈರಸ್‌ ಸೋಂಕು ಹರಡುತ್ತಿರುವ ಪರಿಣಾಮ ಕೇಂದ್ರ-ರಾಜ್ಯ ಸರ್ಕಾರ ದೇವಸ್ಥಾನಗಳನ್ನು ಬಂದ್‌ ಮಾಡಿವೆ. ಹೀಗಾಗಿ ಯುಗಾದಿ ಅಮಾವಾಸ್ಯೆಯನ್ನು ಭಕ್ತರು ಮನೆಯಲ್ಲಿಯೇ ಇದ್ದುಕೊಂಡು ಪೂಜೆ, ಪುನಸ್ಕಾರ, ನೈವೇದ್ಯ ಮಾಡಿದ್ದಾರೆ.

ಯುಗಾದಿ ಅಮಾವಾಸ್ಯೆ ಮತ್ತು ಯುಗಾದಿ ಪಾಡ್ಯ ನಿಮಿತ್ತ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ, ತೋರಣಹಳ್ಳಿಯ ಹನುಮಾನ ದೇವಸ್ಥಾನ, ಯಕ್ಸಂಬಾದ ಬೀರೇಶ್ವರ, ಪಟ್ಟಣಕುಡಿ ಸೂರ್ಯನಾರಾಯಣ ದೇವಸ್ಥಾನ, ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದಲ್ಲಿ ಯುಗಾದಿಯನ್ನು ಭಕ್ತರು ಅದ್ಧೂರಿಯಾಗಿ ಆಚರಿಸುತ್ತಿದ್ದರು.

ಆದರೆ ಭಕ್ತರ ಸಂಭ್ರಮ ಹಾಗೂ ಯುಗಾದಿ ಹಬ್ಬಕ್ಕೆ ಕೋವಿಡ್ 19  ವೈರಸ್‌ ತಣ್ಣೀರೆರಚಿದೆ. ಬೇವು-ಬೆಲ್ಲದ ಬಾಂಧವ್ಯದ ಯುಗಾದಿ ಹಬ್ಬವನ್ನು ಗಡಿ ಭಾಗದ ಜನರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದರು. ಆದರೆ ಕೋವಿಡ್ 19 ವೈರಸ್‌ದಿಂದ ಇಡೀ ರಾಜ್ಯ ಲಾಕ್‌ ಡೌನ್‌ ಇರುವುದರಿಂದ ಜನ ಮನೆಯಿಂದ ಹೊರಬರುತ್ತಿಲ್ಲ, ಕೊರೊನಾ ಮಹಾಮಾರಿಗೆ ಯುಗಾದಿ ಹಬ್ಬ ಸಿಹಿ-ಕಹಿ ಆಗದೇ ಕೇವಲ ಕಹಿ ಆಗಿರುವುದು ಜನರಲ್ಲಿ ಬೇಸರ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next