Advertisement

ಕೊರೊನಾ ಸೋಂಕಿತರ ಸ್ಥಿತಿ ದೇವರಿಗೆ ಪ್ರೀತಿ

07:55 PM May 24, 2021 | Girisha |

ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕಿತ ಬಡವರ ಪರಿಸ್ಥಿತಿ ಎಷ್ಟು ಗಂಭೀರವಾಗಿರುತ್ತದೆ ಎನ್ನುವುದನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ತಂಗಡಗಿ ಗ್ರಾಮದಲ್ಲಿನ ಘಟನೆಯೊಂದು ಬಹಿರಂಗಪಡಿಸಿದೆ.

Advertisement

ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವುದರ ಜೊತೆಗೆ ಹಳ್ಳಿ ಜನ ಕೊರೊನಾ ಮಹಾಮಾರಿಗೆ ಎಷ್ಟೊಂದು ಹೆದರಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ. ಗ್ರಾಮದ ಬಡಿಗೇರ ಓಣಿಯಲ್ಲಿ ಬಡ ಕುಟುಂಬದ ತಾಯಿ ಅನ್ನಪೂರ್ಣ ಬಡಿಗೇರ, ಮಗಳು ಶಾಂತವ್ವ ಬಡಿಗೇರ, ಅಳಿಯ ಅಣ್ಣಪ್ಪ ಬಡಿಗೇರ ಮಾತ್ರ ವಾಸವಿರುತ್ತಾರೆ. ನಿತ್ಯ ದುಡಿದರೆ ಮಾತ್ರ ಹೊಟ್ಟೆ ತುಂಬುವಷ್ಟು ಕಡು ಬಡತನ ಇವರದ್ದು. ಇಂಥ ಸ್ಥಿತಿಯಲ್ಲಿ ಅಣ್ಣಪ್ಪನಿಗೆ ಕೋವಿಡ್‌ ಪಾಸಿಟಿವ್‌ ಕಂಡು ಬಂದು ಮನೆಯಲ್ಲೇ ಐಸೊಲೇಷನ್‌ಗೆ ವ್ಯವಸ್ಥೆ ಮಾಡಲಾಗಿತ್ತು.

ಸಣ್ಣ ಮನೆಯಾದ್ದರಿಂದ ಏಕಾಂತ ವಾಸ ಸಾಧ್ಯವಿರಲಿಲ್ಲ. ಪರಸ್ಪರ ಸಂಪರ್ಕ ಬರಲೇಬೇಕಾದಂಥ ಪರಿಸ್ಥಿತಿ ಇತ್ತು. ಕೋವಿಡ್‌ ಸೋಂಕಿತನ ಮನೆಯಾದ್ದರಿಂದ ಯಾರೂ ಇವರ ಬಳಿ ಬರುತ್ತಿರಲಿಲ್ಲ. ಇವರನ್ನು ಮುಟ್ಟಿಸಿಕೊಳ್ಳುವುದು ಒತ್ತಟ್ಟಿಗಿರಲಿ, ಇವರೊಂದಿಗೆ ಮಾತನಾಡಲೂ ಹಿಂದೇಟು ಹಾಕುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಇಂಥದ್ದರಲ್ಲಿ ಗುರುವಾರ, ಶುಕ್ರವಾರ ಅನ್ನಪೂರ್ಣಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದಳು. ಮನೆಯಲ್ಲಿ ಪಾಸಿಟಿವ್‌ ಸೋಂಕಿತ ಇದ್ದಿದ್ದರಿಂದ ಯಾರೂ ನೆರವಿಗೆ ಬರಲಿಲ್ಲ. ಪಿಡಿಒ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ತಿಳಿಸಿದರೂ ಅವರು ತಕ್ಷಣಕ್ಕೆ ಸ್ಪಂ ದಿಸಿರಲಿಲ್ಲ.

ಅನ್ನಪೂರ್ಣಳ ಪರಿಸ್ಥಿತಿ ಅರಿತವರು ಆಂಬ್ಯುಲೆನ್ಸ್‌ ಹೆಲ್ಪ್ಲೈನ್‌ಗೆ ಕರೆ ಮಾಡಿ ತಂಗಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಆಂಬ್ಯುಲೆನ್ಸ್‌ ತರಿಸಿಕೊಂಡು ಸರ್ಕಾರಿ ಆಸ್ಪತ್ರೆಗ ಕಳಿಸಲು ಸಿದ್ದತೆ ಆಗಿತ್ತು. ಕೋವಿಡ್‌ ಸೋಂಕಿತರು ಎನ್ನುವ ಕಾರಣಕ್ಕೆ ಅನ್ನಪೂರ್ಣಳನ್ನು ಆಂಬ್ಯುಲೆನ್ಸ್‌ಗೆ ಹಾಕಲು ಸಿಬ್ಬಂದಿ ನಿರಾಕರಿಸಿದರು. ನಮಗೆ ಪಿಪಿಇ ಕಿಟ್‌ ಕೊಟ್ಟಿಲ್ಲ. ಮನೆಯವರೇ ಅನ್ನಪೂರ್ಣಳನ್ನು ಆಂಬ್ಯುಲೆನ್‌ Õಗೆ ಹಾಕಬೇಕು ಎಂದು ಹೇಳಿದರು. ಅಳಿಯ ಪಾಸಿಟಿವ್‌ನಿಂದ ನಿಶ್ಯಕ್ತಿ ಹೊಂದಿದ್ದರಿಂದ ಅತ್ತೆಯನ್ನು ಹೊತ್ತು ತರುವುದು ಸಾಧ್ಯವಿರಲಿಲ್ಲ.

ಮಗಳು ಒಬ್ಬಳೇ ಚಡಪಡಿಸುತ್ತಿದ್ದರೂ ಅಸಹಾಯಕತೆ ಅಲ್ಲಿ ಕಂಡು ಬಂತು. ಹೀಗಾಗಿ ನಾಗರತ್ನಳನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತರುವ ಪ್ರಯತ್ನ ಈಡೇರಲಿಲ್ಲ. ಚಿಕಿತ್ಸೆ ನೀಡಲೂ ಯಾರೊಬ್ಬರೂ ನೆರವಿಗೆ ಬರಲಿಲ್ಲ. ನಾಗರತ್ನ ಒದ್ದಾಡುತ್ತಲೇ, ತೀವ್ರ ನೋವಿನಿಂದಲೇ ದಿನ ಕಳೆದಳು. ಶನಿವಾರ ಬಾಗಲಕೋಟೆ ಜಿಲ್ಲೆ ಹುನಗುಂದದ ಫೋಟೊಗ್ರಾಫರ್‌ ಸುರೇಶ ಪತ್ತಾರ ಅವರು ಉದಯವಾಣಿ ಪ್ರತಿನಿ ಧಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ನೆರವಿಗೆ ಧಾವಿಸುವಂತೆ ಕೋರಿದರು.

Advertisement

covid 19 effect in vijayapura ತಕ್ಷಣ ತಹಶೀಲ್ದಾರ್‌, ಆರೋಗ್ಯಾ ಧಿಕಾರಿಗಳನ್ನು ಸಂಪರ್ಕಿಸಿ ಕೋವಿಡ್‌ ರೋಗಿಯನ್ನು ಸಾಗಿಸಲು ಮೀಸಲಿಟ್ಟ ಆಂಬ್ಯುಲೆನ್ಸ್‌ ಅನ್ನು ತಂಗಡಗಿಗೆ ಕಳಿಸಿ ನಾಗರತ್ನಾಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸುವಲ್ಲಿ ಯಶಸ್ವಿಯಾದರು. ಇಲ್ಲಿ ತಪಾಸಣೆ ನಡೆಸಿದ ಮೇಲೆ ಆಕೆಗೆ ಕೋವಿಡ್‌ ಸೋಂಕು ಇಲ್ಲ. ಬೇರೆ ಆರೋಗ್ಯ ಸಮಸ್ಯೆ ಇದೆ ಎನ್ನುವುದು ಗೊತ್ತಾಗಿ ಆ ಕು ಟುಂಬದಲ್ಲಿ ಉಂಟಾಗಿದ್ದ ದುಗುಡ, ಆತಂಕ ನಿವಾರಣೆ ಆದಂತಾಯಿತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next