Advertisement

ಚೀನ: ಮತ್ತೆ 15 ಲಕ್ಷಣ ರಹಿತ ಕೋವಿಡ್‌ ಪ್ರಕರಣ

05:07 PM May 10, 2020 | sudhir |

ಬೀಜಿಂಗ್‌: ಚೀನದಲ್ಲಿ 15 ಹೊಸ ಲಕ್ಷಣ ರಹಿತ (asymptomatic ) ಕೋವಿಡ್‌-19 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಎರಡನೇ ಸುತ್ತಿನಲ್ಲಿ ಒಟ್ಟು 836 ಲಕ್ಷಣ ರಹಿತ ಪ್ರಕರಣಗಳು ಬೆಳಕಿಗೆ ಬಂದಂತಾಗಿವೆ.

Advertisement

ಸೋಂಕಿನ ಯಾವುದೇ ಗಮನಾರ್ಹ ಅಥವಾ ಮೇಲ್ನೋಟಕ್ಕೆ ಕಾಣುವ ರೋಗ ಲಕ್ಷಣಗಳಿಲ್ಲದೆ ಇದ್ದರೆ ಆ ವ್ಯಕ್ತಿಯನ್ನು ಲಕ್ಷಣ ರಹಿತ ಸೋಂಕು ಪೀಡಿತ ಎಂದು ಕರೆಯಲಾಗುತ್ತದೆ.

ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ)ದ ಪ್ರಕಾರ ಶುಕ್ರವಾರದವರೆಗೆ 63 ವಿದೇಶಿಗರು ಸೇರಿದಂತೆ ಒಟ್ಟು 836 ಲಕ್ಷಣ ರಹಿತ ಪ್ರಕರಣಗಳು ಇನ್ನೂ ತಪಾಸಣೆಯಲ್ಲಿವೆ. ಇವು ಸೋಂಕಿನ ಕೇಂದ್ರಗಳಾದ ಹುಬೈ ಪ್ರಾಂತ್ಯ ಮತ್ತು ವುಹಾನ್‌ನಿಂದ ವರದಿಯಾಗುತ್ತಿವೆ.

ಕಳೆದ 35 ದಿನಗಳವರೆಗೆ ಯಾವುದೇ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರಲಿಲ್ಲ ಎಂದು ಸ್ಥಳೀಯ ಆರೋಗ್ಯ ಸಂಸ್ಥೆ ತಿಳಿಸಿದ್ದು, ಶುಕ್ರವಾರವೂ ಯಾವುದೇ ಹೊಸ ಸಾವು – ನೋವು ಸಂಭವಿಸಿಲ್ಲ ಎಂದಿದೆ. ಸದ್ಯ ಚೀನದ ಸಾವಿನ ಸಂಖ್ಯೆ 4,633ರಷ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 82,887 ಆಗಿದೆ. ಕೇವಲ 208 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್‌ಎಚ್‌ಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next