Advertisement
ಯಾದಗಿರಿ ಜಿ.ಪಂ. ಸಭಾಂಗಣದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಯಾದಗಿರಿಯಲ್ಲಿ 735 ಸೋಂಕಿತರು ಪತ್ತೆಯಾಗಿದ್ದು, ಸಂಖ್ಯೆ ಹೆಚ್ಚಿಗೆ ಕಂಡರೂ ಒಬ್ಬರಲ್ಲಿಯೂ ರೋಗ ಲಕ್ಷಣವಿಲ್ಲ. ಜಿಲ್ಲಾಡಳಿತ ಅಗತ್ಯ ಜಾಗೃತಿ ಮೂಡಿಸಿದೆ. ಜನರ ಸಹಕಾರವೂ ಸಿಕ್ಕಿರುವುದು ಇಲ್ಲಿ ಸಮುದಾಯಕ್ಕೆ ಸೋಂಕು ಹರಡಿಲ್ಲ ಎಂದು ಸ್ಪಷ್ಟಪಡಿಸಿದರು.
Related Articles
Advertisement
ಚಿಕ್ಕಬಳ್ಳಾಪುರ ಮತ್ತು ಯಾದಗಿರಿಗೆ ಮೆಡಿಕಲ್ ಕಾಲೇಜು ಆರಂಭಕ್ಕೆ ಶೀಘ್ರವೇ ಕ್ರಮವಹಿಸುವುದಾಗಿ ಹೇಳಿದರು. ಯಾದಗಿರಿಯಲ್ಲಿ 300 ಹಾಸಿಗೆಯ ಕಟ್ಟಡವಿದ್ದು ಅದನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿಕೊಅಡು ತಿಂಗಳೊಳಗೆ ಮುಖ್ಯಮಂತ್ರಿಗಳಿಅದ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದರು.
ಕೇಂದ್ರದ ತಂಡ ಪರಿಶೀಲನೆಗೆ ಬರುವುದಕ್ಕೆ ಮೊದಲು ಎಲ್ಲಾ ಸಿಬ್ಬಂದಿ ನೇಮಕ ಮತ್ತು ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಲಾಕ್‌ಡೌನ್ ಮುಂದುವರೆಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೋಂಕು ನಿಯಂತ್ರಣಕ್ಕೆ ತರಲು ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಜೀವ ಉಳಿಸಿಯಾಗಿದೆ. ಈಗ ಜೀವದ ಜತೆಗೆ ಜೀವನವೂ ಸಹಜ ಸ್ಥಿತಿಗೆ ಬರಬೇಕಿದೆ. ಸಾಮಾಜಿಕ ಅಂತರ ಕಾಪಾಡಿ ಪ್ರತಿತಯೊಬ್ಬರು ಮಾಸ್ಕ್ ಧರಿಸಿ ಎಂದರು.ಸಂಸದ ಡಾ.ಉಮೇಶ ಜಾಧವ್, ಶಾಸಕ ವೆಂಕಟರೆಡ್ಡಿ ಮುದ್ನಾಳ, ಶರಣಬಸ್ಸಪ್ಪ ದರ್ಶನಾಪೂರ ಇದ್ದರು.