Advertisement
ವೇಗವಾಗಿ ಹರಡುತ್ತಿದೆ ಕೋವಿಡ್-19 ಎರಡನೇ ಅಲೆ ಸೋಂಕು
Related Articles
Advertisement
ಸೋಂಕು ಪತ್ತೆಯಾದ ಶಾಲೆಗಳಿಗೆ ಶಿಕ್ಷಣ ಇಲಾಖೆ ಸ್ಯಾನಿಟೈಜ್ ವ್ಯವಸ್ಥೆ ಮಾಡಿದೆ. ಇದರ ಜೊತೆಗೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಶಿಕ್ಷಣಾಧಿಕಾರಿ ಹರೀಶ್ ಗಾಂವ್ಕರ್ ಸೂಚಿಸಿದ್ದಾರೆ.
ಮಾಸ್ಕ್ ಇಲ್ಲದೆ ಬಿಂದಾಸ್ ಒಡಾಟ
ಅಂಕೋಲಾ ತಾಲೂಕಿನಲ್ಲಿ ವೇಗವಾಗಿ ಕೊರೊನಾ ಪ್ರಕರಣ ಏರುತ್ತಿದ್ದರು ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕರು ಮಾತ್ರ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ಬಿಂದಾಸ್ ಆಗಿರುವುದು ಕಂಡು ಬಂದಿದೆ. ಕೊರೊನಾ ಪಾಸಿಟಿವ್ ಪ್ರಕರಣ ಏರುತ್ತಿದ್ದರು ಯಾವುದಕ್ಕೂ ಲೆಕ್ಕಿಸದೆ ಸರಕಾರದ ಆದೇಶಕ್ಕು ಕಿವಿಗೊಡದೆ ತಮ್ಮ ಆರೋಗ್ಯದ ಹಿತದೃಷ್ಠಿಯಿಂದಲು ಉಳಿಯದೆ ಇರುವುದು ಕಂಡು ಬಂದಿದೆ. ಕೊರೊನಾ ಪ್ರಕರಣ ದಿನೇದಿನೇ ಹೆಚ್ಚಾಗುತ್ತಿದ್ದರು ತಾಲೂಕಾಡಳಿತ ಯಾವುದೇ ಕಠಿಣ ನಿರ್ದಾರ ಕೈಗೊಳ್ಳುತ್ತಿಲ್ಲ ಎನ್ನುವುದು ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಜಿಲ್ಲಾಡಳಿತ ಮುಂದೆ ಬಂದು ಅಂಕೋಲಾ ತಾಲೂಕಿನಲ್ಲಿ ಕೊರೊನಾ ತಡೆಗೆ ಕ್ರಮ ವಹಿಸಬೇಕಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೋವಿಡ್ ಕಂಡು ಬಂದ ಶಾಲೆಗೆ ರಜೆ
ಕಾರವಾರ: ಅಂಕೋಲಾ ತಾಲೂಕಿನ ಅಗಸೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಾ.28 ರಂದು 5 ಜನರಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್ ಮಾ.30 ರಿಂದ ಏ.1 ರವರೆಗ ಶಾಲೆಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಈ ಶಾಲೆಗೆ ಮಾತ್ರ ರಜೆ ಘೋಷಿಸಿ, ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಕೋವಿಡ್-19 ಸೋಂಕಿನ ಹರಡುವಿಕೆ ತಡೆಗಟ್ಟುಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಎಚ್‌ಒಗೂ ಸೂಚಿಸಿದ್ದಾರೆ.
ಐವರಿಗೆ ಕೊರೊನಾ ದೃಢ
ದಾಂಡೇಲಿ: ನಗರದಲ್ಲಿ ಮಂಗಳವಾರ ಐವರಿಗೆ ಕೊರೊನಾ ಸೋಂಕು ದೃಢವಾಗಿವೆ. ಟೌನ್‌ಶಿಪ್‌ನಲ್ಲಿ 10 ವರ್ಷದ ಬಾಲಕನಲ್ಲಿ ಮತ್ತು 74 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಂಬೇವಾಡಿಯಲ್ಲಿ 37 ವರ್ಷದ ಪುರುಷನಲ್ಲಿ ಮತ್ತು ಹಳಿಯಾಳ ರಸ್ತೆಯ 45 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ನಗರದ ಇನ್ನೋರ್ವ 45 ವರ್ಷದ ಪುರುಷನಲ್ಲಿಯೂ ಸೋಂಕು ದೃಢಪಟ್ಟಿದೆ. ನಗರದಲ್ಲಿ ಈವರೆಗೆ ಒಟ್ಟು 1189 ಸೋಂಕಿತ ಪ್ರಕರಣಗಳು ದಾಖಲಾಗಿದೆ ಎಂದು ತಹಶೀಲ್ದಾರ್ ಕಚೇರಿ ಅಧಿ ಕಾರಿಗಳು ತಿಳಿಸಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಆರೋಗ್ಯ ನಿಯಾಮವಳಿ ಪಾಲಿಸುವುದನ್ನು ಕಡ್ಡಾಯಗೊಳಿಸಿದಾಗ ಸೋಂಕಿನಿಂದ ದೂರವಿರಲು ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ನಗರದ ಜನತೆ ಜಾಗೃತರಾಗಬೇಕಾಗಿದೆ
ಮತ್ತೆ ನಾಲ್ವರಿಗೆ ಪಾಸಿಟಿವ್
ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ಒಟ್ಟು ನಾಲ್ಕು ಕೋವಿಡ್ ಪಾಸಿಟಿವ್ ವರದಿಯಾಗಿದೆ. ಪಟ್ಟಣದ ನೂತನನಗರ ಒಂದು, ಕಾಳಮ್ಮನಗರ ಪ್ರೌಢಶಾಲೆಯಲ್ಲಿ ಮೂರು ಪಾಸಿಟಿವ್ ಕಾಣಿಸಿಕೊಂಡಿದೆ. ಸೋಮವಾರ ಅತಿಯಾಗಿ ಕಾಣಿಸಿಕೊಂಡ ವೈಟಿಎಸ್ಸೆಸ್ ಪ್ರೌಢಶಾಲೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.