ಬೆಂಗಳೂರು: ಕೋವಿಡ್-19 ಭೀತಿ ಪ್ರಸಕ್ತ ಸಾಲಿನ ಎಲ್ಲ ಪರೀಕ್ಷೆಯನ್ನು ಮುಂದೂಡುವಂತೆ ಮಾಡಿದ್ದು ಮಾತ್ರವಲ್ಲದೆ, ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆ ಮೇಲೂ ತನ್ನ ಕರಾಳ ಕೈ ಚಾಚಿದೆ. ರಾಜ್ಯದಲ್ಲಿ ಒಂದ ರಿಂದ 6ನೇ ತರಗತಿ ವರೆಗಿನ ಪರೀಕ್ಷೆಗಳೇ ರದ್ದಾ ಗಿದೆ ಹಾಗೂ ವಿದ್ಯಾ ರ್ಥಿಗಳನ್ನು ಮೌಲ್ಯಮಾಪನದ ಆಧಾರದಲ್ಲಿ ಮುಂದಿನ ತರಗತಿಗಳಿಗೆ ತೇರ್ಗಡೆ ಗೊಳಿಸಲು ನಿರ್ದೇಶಿಸಲಾಗಿದೆ.
7ನೇ ತರಗತಿಯ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ, 8 ಮತ್ತು 9ನೇ ತರಗತಿಯ ಪರೀಕ್ಷೆಯ ಜತೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದರ ಜತೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವಿಷಯವನ್ನು ಮೂಂದೂಡಲಾಗಿದೆ. ಹಾಗೆಯೆ ಪಾಲಿಟೆಕ್ನಿಕ್, ಐಟಿಐ ಪರೀಕ್ಷೆಗಳನ್ನು ಮುಂದೂ ಡಲಾಗಿದೆ. ಎಲ್ಲ ವಿಶ್ವವಿದ್ಯಾಲಯಗಳ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿ, ಹಾಸ್ಟೆಲ್ ಗಳಿಂದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೆಲವು ವಿವಿಗಳ ಎಂಜಿನಿಯರಿಂಗ್, ವೈದ್ಯ ಕೀಯ, ನರ್ಸಿಂಗ್ ಇತ್ಯಾದಿ ಪರೀಕ್ಷೆಗಳ ವೇಳಾಪಟ್ಟಿ ಇನ್ನಷ್ಟೆ ಬರಬೇಕಿದೆ.
ಮಾರ್ಚ್ ತಿಂಗಳಲ್ಲಿ ನಿಗದಿಯಾಗಿದ್ದ ಬಹತೇಕ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನೀಟ್, ಜೆಇಇ, ಸಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳು ಇನ್ನಷೇ ಆರಂಭವಾಗಬೇಕಿದೆ. ಈ ಪರೀಕ್ಷೆ ಮುಂದೂಡುವ ಸಾದ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಶಿಕ್ಷಣ ತಜ್ಞರು ಅಂದಾಜಿ ಸಿದ್ದಾರೆ. ಕೆಲವೊಂದು ಪರೀಕ್ಷೆ ಹೊರತುಪಡಿಸಿ ಮಾರ್ಚ್-ಎಪ್ರಿಲ್‌ನಲ್ಲಿ ನಡೆಯಬೇಕಿದ್ದ ಬಹುತೇಕ ಎಲ್ಲ ಪರೀಕ್ಷೆ ಮುಂದೂಡಿರುವುದರಿಂದ ಕೋವಿಡ್-19 ಭೀತಿ ಕಡಿಮೆಯಾದ ಬಳಿಕ ಒಂದೊಂದೆ ಪರೀಕ್ಷೆ ನಡೆಸಬೇಕಾಗುತ್ತದೆ. ಇದು ಮುಂದಿನ ಶೈಕ್ಷಣಿಕ ವರ್ಷಕ್ಕೆ ತೊಡಕಾಗಲಿದೆ.
ದಾಖಲಾತಿ ಕಷ್ಟ: ಬಹುತೇಕ ಶಾಲಾಕಾಲೇಜುಗಳಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದಾಖಲಾತಿ ಪ್ರಕ್ರಿಯೇ ಪೂರ್ಣವಾಗಿರುತ್ತದೆ. ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಫೆಬ್ರವರಿ ಮಾರ್ಚ್ ನಲ್ಲೇ ದಾಖಲಾತಿಯನ್ನು ಅನೌಪಚಾರಿಕವಾಗಿ ಪೂರ್ಣಗೊಳಿಸಿಕೊಂಡಿರುತ್ತವೆ. ಆದರೆ, ಈ ಸಾಲಿನ ಸಂದಿಗ್ಧತೆ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳಲ್ಲಿ ಹತ್ತಾರು ಬಗೆಯಲ್ಲಿ ಭಯ ಸೃಷ್ಟಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದು ಪಲಿತಾಂಶ ಬಾರದೆ ಪ್ರಥಮ ಪಿಯುಸಿ ದಾಖಲಾತಿ ನಡೆಯಲ್ಲ.
ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲದೆ ಪ್ರಥಮ ಪದವಿ ತರಗತಿ ನಡೆಯುವುದಿಲ್ಲ. ಪದವಿ ಫಲಿತಾಂಶ ಇಲ್ಲದೆ ಸ್ನಾತಕೋತ್ತರ ಪದವಿ ತರಗತಿ ನಡೆಯುವುದಿಲ್ಲ. ಹೀಗೆ ಒಂದೊಕ್ಕೊಂದು ಕೊಂಡಿಯಾಗಿದೆ. ಪರೀಕ್ಷೆ ವಿಳಂಬವಾಗುತ್ತಿದ್ದಂತೆ ಮುಂದಿನ ಶೈಕ್ಷಣಿಕ ವರ್ಷದ ಆರಂಭವೂ ವಿಳಂಬವಾಗಲಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಮತ್ತು ಅವರ ಭವಿಷ್ಯಕ್ಕೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತೇವೆ. ಮುಂದೂಡಲಾದ ಪರೀಕ್ಷೆಯನ್ನು ನಡೆಸಿ, ಮುಂದಿನ ಶೈಕ್ಷಣಿಕ ತರಗತಿಗೆ ಅನುವು ಮಾಡಿಕೊಡಲಿದ್ದೇವೆ.
-ಉಮಾಶಂಕರ್, ಪ್ರಧಾನ ಕಾರ್ಯದರ್ಷಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
ಸದ್ಯ ಬೆಂಗಳೂರು ವಿವಿಯ ಎಲ್ಲ ಕಾರ್ಯಚಟುವಟಿಕೆ ಮುಂದೂಡಿದ್ದೇವೆ. ಆಡಳಿತಾತ್ಮಕ ಕಾರ್ಯಗಳು ಮಾತ್ರ ನಡೆಯುತ್ತಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮನ ತೆಗೆದುಕೊಳ್ಳಲಿದ್ದೇವೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂವಿವಿ
* ರಾಜು ಖಾರ್ವಿ ಕೊಡೇರಿ