Advertisement
ಆದರೆ ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಿದ್ದು, ಹೋಮ್ ಕ್ವಾರಂಟೈನ್ ಅಂಥ ಸಾಮಾಜಿಕ ಅಂತರದಂಥ ನಿಯಮಗಳನ್ನು ಕಠಿಣವಾಗಿ ಪಾಲಿಸಿದರೆ ಕೋವಿಡ್ 19 ನನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎನ್ನುತ್ತಾರೆ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ.
ಜಾರ್ಖಂಡ್ ಮೂಲದ ಈಕೆ ಸದ್ಯ ಕೋವಿಡ್ 19 ಸೋಂಕಿನಿಂದ ಮುಕ್ತರಾಗಿ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲೇ, ದೇಶದ ಜನತೆಗೆ ಕೋವಿಡ್ 19 ತಡೆಗಟ್ಟಲು ಸಾರ್ವಜನಿಕರಾದ ನಮ್ಮ ಸಹಕಾರ ಮುಖ್ಯ. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಎಂಬ ಸಂದೇಶವನ್ನು ನೀಡಿದ್ದಾರೆ. ಸ್ವಯಂ ಆಸ್ಪತ್ರೆಗೆ ದಾಖಲು
ಇನ್ನೂ ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಈಕೆ, ಪ್ರವಾಸಕ್ಕೆಂದು ಫ್ರಾನ್ಸ್‌ಗೆ ತೆರಳಿದ್ದು, ಹಿಂದಿರುಗಿದ ಅನಂತರದ ದಿನಗಳಲ್ಲಿ ಸೋಂಕು ದೃಢ ಪಟ್ಟಿತ್ತು. ಆದರೆ ತತ್‌ಕ್ಷಣ ಸಾಮಾಜಿಕ ಕಳಕಳಿ ಮೆರೆದ ಆಕೆ, ಹೋಮ್ ಕ್ವಾರೇಂಟನ್ ಆಗಿದ್ದು, ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಲಿನ ನಿಯಮ ಹಾಗೂ ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿ ಬದುಕು ಗೆದ್ದಳು.
Related Articles
ಕೋವಿಡ್ 19 ಬಂದವರು ಹೆದರಬಾರದು, ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಮತ್ತು ಅವರು ಅನುಸರಿಸುವ ಚಿಕಿತ್ಸಾ ವಿಧಾನವನ್ನು ನಂಬಬೇಕು. ಸುಳ್ಳು ವದಂತಿಗಳಿಗೆ ಕಿವಿಗೊಡದೇ ಸೋಂಕನ್ನು ಎದುರಿಸುವ ಧೈರ್ಯಬೇಕು. ಇದರ ಜತೆಗೆ ಸರಕಾರದ ಆದೇಶವನ್ನು ಗೌರವಿಸಿ, ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂಬ ಸಲಹೆ ನೀಡಿದ್ದಾಳೆ.
Advertisement