Advertisement

ಕೋವಿಡ್‌ 19 : ಈ ಸಾಂಕ್ರಾಮಿಕ ಇತರ ವೈರಸ್‌ಗಿಂತ‌ ಭಿನ್ನ ಹೇಗೆ?

10:26 AM Aug 22, 2020 | sudhir |

ಲಂಡನ್‌: ಕೋವಿಡ್‌ನ‌ ಮತ್ತೂಂದು ರಹಸ್ಯವನ್ನು ವಿಜ್ಞಾನಿಗಳು ಬಗೆಹರಿಸಿ¨ªಾರೆ. ವಿಜ್ಞಾನಿಗಳ ಪ್ರಕಾರ ಕೋವಿಡ್‌ ಸೋಂಕಿನ ಸಮಯದಲ್ಲಿ ರೋಗಿಯು ಯಾವುದೇ ವಾಸನೆ ಅಥವಾ ಸುಗಂಧವನ್ನು ಅನುಭವಿಸಲು ಬರುವುದಿಲ್ಲ. ಈ ರೋಗಲಕ್ಷಣವು ಶೀತ ಮತ್ತು ಜ್ವರದ ಸಮಯದಲ್ಲಿ ಕಂಡುಬರುವ ರೋಗಲಕ್ಷಣಗಳಿಗಿಂತ ಭಿನ್ನವಾಗಿರುತ್ತದೆ.

Advertisement

ಕೋವಿಡ್‌ ಸಂದರ್ಭದಲ್ಲಿ ರೋಗಿಯಲ್ಲಿ ವಾಸನೆಯ ಗ್ರಹಿಸುವ ಸಾಮರ್ಥ್ಯ ಖಾಲಿಯಾದಾಗ, ಅವರು ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಇದರಿಂದ ಶೀತ ಉಂಟಾಗುವುದಿಲ್ಲ. ಈ ರೋಗಲಕ್ಷಣಗಳು ಸಾಮಾನ್ಯ ಶೀತ ಅಥವಾ ಜ್ವರಕ್ಕಿಂತ ಭಿನ್ನವಾಗಿರುತ್ತದೆ ಎಂದಿದ್ದಾರೆ.

ಜರ್ನಲ್‌ ಆಫ್ ರೈನಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕೋವಿಡ್‌ ರೋಗಿಗಳಲ್ಲಿ ವೈರಸ್‌ ಮೆದುಳಿನ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರ ಅನಂತರ ರೋಗಿಯ ವಾಸನೆ ಮತ್ತು ರುಚಿಯನ್ನು ಗುರುತಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ.

ಸಂಶೋಧಕರ ಪ್ರಕಾರ ಈ ಸಮಯದಲ್ಲಿ ಕೊರೊನಾ ಇತರ ಉಸಿರಾಟದ ವೈರಸ್‌ಗಳಿಗಿಂತ ಭಿನ್ನವಾಗಿ ವರ್ತಿಸುತ್ತದೆ ಎಂದು ಕಂಡುಬಂದಿದೆ. ಕೋವಿಡ್‌ -19 ವೈರಸ್‌ ರೋಗಿಗಳ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಈ ಕಾರಣದಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯು ದೇಹವನ್ನು ರಕ್ಷಿಸುವ ಬದಲು ಹಾನಿಗೊಳಗಾಗಲು ಪ್ರಾರಂಭಿಸುತ್ತದೆ. ಇದನ್ನು ಸೈಟೊಕಿನ್‌ ಎಂದು ಕರೆಯಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next