Advertisement

ಚೀನ ಮೇಲಿನ ಆರೋಪಕ್ಕೆ ಅಮೆರಿಕ ಸಾಕ್ಷ್ಯ ಕೊಟ್ಟಿಲ್ಲ

02:28 PM May 06, 2020 | sudhir |

ಜಿನಿವಾ: ಕೋವಿಡ್ ವುಹಾನ್‌ ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿದೆ ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಪೂರಕವಾದ ಸಾಕ್ಷ್ಯಗಳನ್ನು ಅ ದೇಶ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್‌ ಮೂಲಕ್ಕೆ ಸಂಬಂಧಿಸಿದಂತೆ ಅಮೆರಿಕದಿಂದ ಯಾವುದೇ ನಿರ್ದಿಷ್ಟ ಪುರಾವೆಗಳು ಲಭ್ಯವಾಗಿಲ್ಲ. ಈ ಕಾರಣದಿಂದ ಅಮೆರಿಕ ಆರೋಪವು ನಮ್ಮ ದೃಷ್ಟಿಕೋನದಲ್ಲಿ ಊಹಾತ್ಮಕವಾಗಿಯೇ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ನಿರ್ದೇಶಕ ಮೈಕೆಲ್‌ ರಯಾನ್‌ ಹೇಳಿದ್ದಾರೆ.

Advertisement

ಚೀನದ ವುಹಾನ್‌ ನಗರದಲ್ಲಿರುವ ವನ್ಯಜೀವಿ ಮಾಂಸ ಮಾರುಕಟ್ಟೆ (ವೆಟ್‌ ಮಾರ್ಕೆಟ್‌)ಯಲ್ಲಿ ಪ್ರಾಣಿಗಳಿಂದ ಮನುಷ್ಯನಿಗೆ ಈ ವೈರಸ್‌ ಹರಡಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಂಬಿದ್ದಾರೆ. ಚೀನ ರೋಗವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಈ ವರೆಗೆ ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ವೈರಸ್ನ ಉಗಮ ಸ್ಥಾನ ವುಹಾನ್‌ ಪ್ರಯೋಗಾಲಯ ಎಂಬುದನ್ನು ಹಲವು ಸಂದರ್ಭಗಳಲ್ಲಿ ಉಲ್ಲೇಖೀಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪುರವಾವೆಗಳಿವೆ ಎಂದೂ ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next