Advertisement

ಇಬ್ಬರು ಕಾನ್ಸ್ ಟೇಬಲ್ ಗೆ ಕೋವಿಡ್ ಸೋಂಕು; ಈಗ ಠಾಣೆಯ 26 ಮಂದಿಗೂ ಕ್ವಾರಂಟೈನ್

08:59 AM Apr 18, 2020 | Nagendra Trasi |

ನವದೆಹಲಿ: ಇಬ್ಬರು ಪೊಲೀಸರಿಗೆ ಕೋವಿಡ್ 19 ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ದಿಲ್ಲಿಯ ಚಾಂದ್ನಿ ಮಹಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೇರಿದಂತೆ 26 ಮಂದಿ ಪೊಲೀಸರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣಾಧಿಕಾರಿ ಸೇರಿದಂತೆ 26 ಮಂದಿಯನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಚಾಂದ್ನಿ ಮಹಲ್ ಪ್ರದೇಶದಲ್ಲಿ ತಬ್ಲಿಘಿ ಜಮಾತ್ ನಲ್ಲಿ ಪಾಲ್ಗೊಂಡಿದ್ದ 52 ಜನರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಜಮಾತ್ ಗೆ ಹೋಗಿ ಬಂದವರ ಸಂಪರ್ಕಕ್ಕೆ ಬಂದ ಇಬ್ಬರು ಕಾನ್ಸಟೇಬಲ್ ಗೆ ವೈರಸ್ ಹರಡಿರುವುದಾಗಿ ವರದಿ ವಿವರಿಸಿದೆ.

ಸೆಂಟ್ರಲ್ ದೆಹಲಿಯ ಚಾಂದ್ನಿ ಮಹಲ್ ಪ್ರದೇಶದಲ್ಲಿ ಈಗಾಗಲೇ ಕೋವಿಡ್ 19 ವೈರಸ್ ನಿಂದ ಮೂವರು ಸಾವನ್ನಪ್ಪಿದ್ದರು. ಈ ಪ್ರದೇಶದ ವಿವಿಧ ಮಸೀಸಿದಿಗಳಲ್ಲಿದ್ದ 102 ಮಂದಿಯನ್ನು ಸ್ಥಳಾಂತರಿಸಿದ್ದು, ಇವರಲ್ಲಿ 52 ಮಂದಿಯನ್ನು ಪರೀಕ್ಷಿಸಿದ ವೇಳೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದೆ.

ಏಪ್ರಿಲ್ 10ರಂದು ದಿಲ್ಲಿ ಸರ್ಕಾರ ಚಾಂದ್ನಿ ಮಹಲ್ ಪ್ರದೇಶವನ್ನು ನಿಯಂತ್ರಿತ ವಲಯ ಎಂದು ಘೋಷಿಸಿತ್ತು. ಇಡೀ ಪ್ರದೇಶವನ್ನು ಸೀಲ್ಡ್ ಮಾಡಲಾಗಿತ್ತು ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next