Advertisement
ಅಮೆರಿಕದ ಮೈಕ್ರೋಸಾಫ್ಟ್, ಆ್ಯಪಲ್ ಮತ್ತು ಅಮೆಜಾನ್ ಕಂಪೆನಿಗಳಿಗೆ ಲಾಕ್‌ಡೌನ್‌ನಿಂದ ಆಗಿರುವುದು ಲಾಭವೇ ಹೊರತು ನಷ್ಟವಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 100,000 ಗೋದಾಮಿನ ಕಾರ್ಮಿಕರ (ಪ್ಯಾಕಿಂಗ್ ಮತ್ತು ಮಾನಿಟರಿಂಗ್)ನ್ನು ನೇಮಿಸಿಕೊಳ್ಳಲು ಅಮೆಜಾನ್ ನಿರ್ಧರಿಸಿದೆ. ಫೇಸ್‌ಬುಕ್ ನಲ್ಲೂ ಆಶಾದಾಯಕ ಬದಲಾವಣೆಗಳು ಕಂಡುಬರುತ್ತಿದ್ದು ವೀಡಿಯೊ ಕರೆ ಮತ್ತು ಸಂದೇಶ ರವಾನೆಗೆ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸ್ಫೋಟಗೊಂಡಿದೆ ಎಂದಿದ್ದಾರೆ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರರ್‌ಬರ್ಗ್. ಇವೆಲ್ಲದರ ಮಧ್ಯೆ ಆನ್‌ಲೈನ್ ಸಹಯೋಗಕ್ಕಾಗಿ ತನ್ನ ಸಾಫ್ಟ್ವೇರ್ ಬಳಸುವ ಸಂಖ್ಯೆಗಳು ಒಂದೇ ವಾರದಲ್ಲಿ ಸುಮಾರು ಶೇ. 40ರಷ್ಟು ಏರಿಕೆಯಾಗಿದೆ ಎಂದಿದೆ ಮೈಕ್ರೋಸಾಫ್ಟ್. ಈ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ವಿಶ್ಲೇಷಣಾ ವರದಿ ಪ್ರಕಟಿಸಿದೆ.
ಮೈಕ್ರೋಸಾಫ್ಟ್, ಆ್ಯಪಲ್ ಮತ್ತು ಅಮೆಜಾನ್‌ನಂತಹ ದೈತ್ಯ ಕಂಪೆನಿಗಳು ಅಮೆರಿಕದ ಆರ್ಥಿಕತೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿವೆ. ಅಮೆರಿಕದಲ್ಲಿ ಈಗ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ಅವುಗಳಿಗೆ ಶಕ್ತಿ ತುಂಬಲು ಈ ಸಂಸ್ಥೆಗಳು ಪ್ರಯತ್ನಿಸಬಹುದು. ಈಗಾಗಲೇ ಅಮೆಜಾನ್‌ಆನ್‌ಲೈನ್ ಮಾರುಕಟ್ಟೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ತನ್ನ ಸಿಬಂದಿಗೆ ಮನೆಯಿಂದಲೇ ನಡೆಸುವಂತೆ ಹೇಳಿದೆ. ಆ್ಯಪಲ್ ಮೊಬೈಲ್ ಸಾಧನಗಳಿಗೆ ಮಾರ್ಕೆಟಿಂಗ್ ಕುಸಿತವಾಗಿದೆ ನಿಜ. ಆ್ಯಪಲ್ ಸ್ಟೋರ್‌ಗಳು ತೆರೆಯದೇ ಇದ್ದ ಕಾರಣ ಈ ವರ್ಷ ಐಫೋನ್ ಮಾರಾಟ ನಿಧಾನವಾಗಲಿದೆ. ವಿಶ್ಲೇಷಕರ ಪ್ರಕಾರ ಮುಂದಿನ ವರ್ಷ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆಯಂತೆ.
Related Articles
Advertisement