Advertisement
ಇವರ ಮೇಲೆ ನಿಗಾ ವಹಿಸಲು ಸುಧಾರಿತ ಆ್ಯಪ್ ನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರವಿವಾರ ಮಿನಿವಿಧಾನ ಸೌಧದಲ್ಲಿರುವ ವಾರ್ ರೂಮ್ ನಲ್ಲಿ ಬಿಡುಗಡೆ ಗೊಳಿಸಿದರು.
Related Articles
Advertisement
ಕೋವಿಡ್-19 ಕ್ವಾರಂಟೈನ್ ಟ್ರ್ಯಾಕರ್ ಆ್ಯಪ್ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಆಗಿದ್ದು ತಾಲೂಕು ಆರೋಗ್ಯಧಿಕಾರಿ, ತಹಶೀಲ್ದಾರ್, ವೃತ್ತ ನಿರೀಕ್ಷಕರು ಇದರ ಮೇಲುಸ್ತುವಾರಿ ವಹಸಲಿದ್ದಾರೆ. ಬೀಟ್ ಪೊಲೀಸ್ ಅವರ ಸ್ಮಾರ್ಟ್ ಫೋನ್ ಗಳಿಗೆ ಆ್ಯಪ್ ಅಳವಡಿಕೆ ಮಾಡಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡುವ ಬೀಟ್ ಪೊಲೀಸರು ಮನೆ ಮತ್ತು ಶಂಕಿತನ ಭಾವಚಿತ್ರ ಪಡೆದು ಅಪ್ ಡೇಟ್ ಮಾಡಬೇಕಿದೆ. ಆಕಾಸ್ ಮಾತ್ ಸ್ಥಳದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಲ್ಲಿ ನೆಟ್ವರ್ಕ್ ಬಂದ ಬಳಿಕ ಅಪ್ಡೇಟ್ ಆಗಲಿದೆ. ಇದರಿಂದ ಹೋಮ್ ಕ್ವಾರಂಟೈನ್ ಸಂಪೂರ್ಣ ಚಿತ್ರಣ ಲಭ್ಯವಾಗಲಿದ್ದು ಪ್ರತಿ ದಿನ ಪೊಲೀಸ್ ಭೇಟಿ ನೀಡಿರುವ ಕುರಿತು ಮಾಹಿತಿ ಲಭ್ಯವಾಗಲಿದೆ. ಕ್ವಾರಂಟೈನ್, ಪಾಸಿಟಿವ್, ನೆಗೆಟಿವ್, 14 ದಿನಗಳ ಬಳಿಕದ ವರದಿ ಮನೆಯಲ್ಲಿ ಇಲ್ಲದಿದ್ದರೆ, ಅವರೊಂದಿಗೆ ಜಾಸ್ತಿ ಜನ ಸಂಪರ್ಕದಲ್ಲಿದ್ದರೆ ಹೈ ಅಲರ್ಟ್ ಎಂದು ವರದಿ ನೀಡಿದರೆ ಮೇಲುಸ್ತುವಾರಿಗಳ ದೂರವಾಣಿ ಸಂಖ್ಯೆಗೆ ತಕ್ಷಣ ಸಂದೇಶ ರವಾನೆಯಾಗಲಿದೆ. ತಕ್ಷಣ ಜಾಗೃತರಾಗಬಹುದಾಗಿದೆ. ಪಬ್ಲಿಕ್ ಗಳಿಗೆ ಅವರ ಏರಿಯಾದವರಲ್ಲಿ ಇದ್ದವರ ಮಾಹಿತಿಯೂ ಇದೇ ಆ್ಯಪ್ ನಿಂದ ಪಡೆಯಬಹುದು. ಒಟ್ಟು 81 ಗ್ರಾಮದ ಡೇಟಾ ಸಿಗಲಿದ್ದು, ಇದರಿಂದ ಸ್ಥಳೀಯರು ಸೋಂಕಿತನ ಮೇಲೆ ನಿಗಾದಲ್ಲಿರಿಸಬಹುದಾಗಿದೆ.
ಕಿಯೋನಿಕ್ಸ್ ನ ಆ್ಯಪ್ ಅಭಿವೃದ್ಧಿ ಸಂಯೋಜಕರಾದ ಅರವಿಂದ್ ಭಟ್ ಮತ್ತು ಬಾಲಕೃಷ್ಣ ಶೆಟ್ಟಿ ಹೊಸ ಆ್ಯಪ್ ಅಭಿವೃದ್ಧಿ ಪ್ರಡಿಸಿದ್ದಾರೆ. ಕೋವಿಡ್ 19 ಗೃಹ ಪರಿವೀಕ್ಷಣಾ ( ಕ್ವಾರಂಟೈನ್ ) ಆಗಿರುವಂತವರ ವರದಿ ಪಡೆಯಬಹುದಾದ ಆ್ಯಪ್ ಲೋಕಾರ್ಪಣೆಗೊಂಡಿದೆ. ತಾಲೂಕಿನ 220 ಮಂದಿಯ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ. ಇದು ದೇಶದಲ್ಲೆ ಮೊದಲಬಾರಿಗೆ ಪರಿಚಯಿಸಿದ್ದು. ದೇಶದೆಲ್ಲೆಡೆ ಈ ಆ್ಯಪ್ ಬಳಸುವ ಮೂಲಕ ಕೋವಿಡ್ 19 ಶಂಕಿತರ ಮೇಲೆ ನಿಗಾ ಇಟ್ಟು ಕೋವಿಡ್ 19 ಮುಕ್ತ ದೇಶವಾಗಿಸಲು ಸಹಕಾರಿಯಾಗಲಿದೆ.
– ಹರೀಶ್ ಪೂಂಜ, ಶಾಸಕ