ನವದೆಹಲಿ: ಭಾರತ್ ಬಯೋಟೆಕ್ ಶನಿವಾರ(ಜುಲೈ 03) ಕೋವ್ಯಾಕ್ಸಿನ್ ನ 3ನೇ ಹಂತದ ಪ್ರಯೋಗಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಇದು ಒಟ್ಟಾರೆ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ ಎಂದು ಪ್ರತಿಪಾದಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಲ್ಲಿದ್ದಲು ಸರಬರಾಜು ಟೆಂಡರ್‌ನಲ್ಲಿ ಅಕ್ರಮ: ತನಿಖೆಗೆ ನಾನಾ ಪಟೋಲೆ ಆಗ್ರಹ
ಭಾರತದ ಅತೀ ದೊಡ್ಡ ಪರಿಣಾಮಕಾರಿ ಪ್ರಯೋಗದಲ್ಲಿ ಕೋವ್ಯಾಕ್ಸಿನ್ ಸುರಕ್ಷಿತ ಎಂದು ಸಾಬೀತಾಗಿರುವುದಾಗಿ ಹೈದರಾಬಾದ್ ಮೂಲದ ಕಂಪನಿ ತಿಳಿಸಿದ್ದು, ಈ ಸಂದರ್ಭದಲ್ಲಿ ಅಂತಿಮ 3ನೇ ಹಂತದ ಪೂರ್ವ ಮುದ್ರಣ ಡೇಟಾವನ್ನು ಹಂಚಿಕೊಂಡಿದೆ.
2020ರ ನವೆಂಬರ್ 16 ಮತ್ತು 2021ರ ಜನವರಿ 7ರ ನಡುವೆ 25,798ಕ್ಕೂ ಹೆಚ್ಚು ಮಂದಿಯನ್ನು ಪ್ರಯೋಗಕ್ಕಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 24,419 ಮಂದಿ ಕೋವ್ಯಾಕ್ಸಿನ್ ಮತ್ತು ಪ್ಲೆಸಿಬೊ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರು.
ಪ್ರಕರಣಗಳ ವಿಶ್ಲೇಷಣೆಯಲ್ಲಿ, ಎರಡನೇ ವ್ಯಾಕ್ಸಿನೇಷನ್ ಬಳಿಕ ಕನಿಷ್ಠ ಎರಡು ವಾರಗಳ ನಂತರ ಭಾಗವಹಿಸಿದ್ದ 16,973 (0.77%) ಮಂದಿಯಲ್ಲಿ 130 ಕೋವಿಡ್ 19 ರೋಗಲಕ್ಷಣ ಪ್ರಕರಣ ವರದಿಯಾಗಿದೆ. ಆದರೆ ಇದರಲ್ಲಿ ಒಟ್ಟಾರೆ ಶೇ.77.8ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿರುವುದಾಗಿ ವರದಿ ವಿವರಿಸಿದೆ.